ಸರ್ಕಾರ ಬಿಜೆಪಿ ಐಟಿ ಸೆಲ್‌, ಪಿಎಂಒ ಟ್ವಿಟ್ಟರ್‌ಗಳನ್ನು ಪರಿಶೀಲಿಸುತ್ತದೆಯೇ..? ಸರ್ಕಾರ-ಟ್ವಿಟ್ಟರ್‌ ತಿಕ್ಕಾಟದ ಮಧ್ಯೆ ಪಕ್ಷದ ವಿರುದ್ಧದ ನಿಲುವು ತಳೆದ ಡಾ.ಸ್ವಾಮಿ

 

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೇಂದ್ರ ಸರ್ಕಾರ ಹಾಗೂ ಟ್ವಿಟ್ಟರ್‌ ನಡುವಿನ ತಿಕ್ಕಾಟ ಮುಂದುವರಿದ್ದಿದ್ದು, ಟ್ವಿಟ್ಟರ್‌ ಶೀಘ್ರದಲ್ಲೇ ದಂಡನಾತ್ಮಕ ಕ್ರಮ ಎದುರಿಸುವುದು ನಿಚ್ಚಳವಾಗಿದೆ.
ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಸ್ವಪಕ್ಷ ಬಿಜೆಪಿ ಮೇಲೆಯೇ ಈ ವಿಷಯದಲ್ಲಿ ವ್ಯಂಗ್ಯವಾಡಿದ್ದಾರೆ. ಎಲ್ಲರ ಸಮಸ್ಯಾತ್ಮಕ ಕಾಮೆಂಟ್‌ಗಳನ್ನು ಪರಿಹರಿಸಲು ಸಾಧ್ಯವೇ ಎಂದು ಸರ್ಕಾರದ ನಿಲುವಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ಆಕ್ಷೇಪಾರ್ಹ ವಿಷಯವನ್ನು ನಿಭಾಯಿಸುವಾಗ ಹಾಗೂ ಮೋದಿ ಜನಪ್ರಿಯತೆಯ ಬಗ್ಗೆ ಹೇಳುವಾಗ ಪ್ರತಿಸ್ಪರ್ಧಿಗಳ ವಿರುದ್ಧ ಟ್ವಿಟ್ಟರ್‌ನಲ್ಲಿ ಹೊಲಸು ಭಾಷೆಯನ್ನು ಬಳಸುವ ಬಿಜೆಪಿ ಐಟಿ ಸೆಲ್ ಮತ್ತು ಪಿಎಂಒ ಕಾರ್ಯಶೈಲಿಯನ್ನು ಸರ್ಕಾರ ಪರಿಶೀಲಿಸುತ್ತದೆಯೇ ಎಂದು ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್‌ನಲ್ಲಿ ಕೇಳಿದ್ದಾರೆ.
ಕೆಲತಿಂಗಳಿಂದ ಸ್ವಾಮಿ ಬಿಜೆಪಿ ಐಟಿ ಸೆಲ್ ಬಗ್ಗೆ ತಮ್ಮ ಅಸಮಾಧಾನ ಮುಚ್ಚಿಟ್ಟಿಲ್ಲ. ಸೆಪ್ಟೆಂಬರ್ 2020ರಲ್ಲಿ ಸ್ವಾಮಿ ಬಿಜೆಪಿ ಐಟಿ ಸೆಲ್ ತನ್ನ ಮೇಲೆ “ತನ್ನ ಮೇಲೆ ವೈಯಕ್ತಿಕ ದಾಳಿ” ಮಾಡಲು ನಕಲಿ ಖಾತೆ ಬಳಸಿದೆ ಎಂದು ಆರೋಪಿಸಿದ್ದರು. ಅದರ ಕೆಲವು ಸದಸ್ಯರು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ನಕಲಿ ಐಡಿ ಟ್ವೀಟ್ ಗಳನ್ನು ಹಾಕುತ್ತಿದ್ದಾರೆ” ಎಂದು ಸ್ವಾಮಿ ಟ್ವೀಟ್ ಮಾಡಿದ್ದರು. ಅಂದಿನಿಂದ, ಅವರು ಒಂದೇ ಧಾಟಿಯಲ್ಲಿ ಹಲವಾರು ಕಾಮೆಂಟ್ಗಳನ್ನು ಮಾಡಿದ್ದಾರೆ.
ಈಗ ಟ್ವಿಟ್ಟರ್‌ ಹಾಗೂ ಕೇಂದ್ರ ಸರ್ಕಾರದ ನಡುವೆ ಇದೇ ಪ್ರಚೋದನಕಾರಿ ಭಾಷೆ ಹಾಗೂ ರೈತ ಹೋರಾಟದ ಬಗ್ಗೆ ಆಕ್ಷೇಪಾರ್ಹ ಹ್ಯಾಶ್‌ಟ್ಯಾಗ್‌ ಹ್ಯಾಂಡಲ್‌ಗಳ ಬಗ್ಗೆ ತಿಕ್ಕಾಟ ನಡೆದಿರುವಾಗ ಸ್ವಾಮಿ ತಮ್ಮ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಹೇಳಿದ್ದಾರೆ. ಹಾಗೂ ತಮ್ಮ ಪಕ್ಷದ ಐಟಿ ಸೆಲ್‌ ಟ್ವಿಟ್ಟರ್‌ಗಳಲ್ಲಿ ಬಳಸುವ ಭಾಷೆಯ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತದೆಯೇ ಎಂದು ಕೇಳಿದ್ದಾರೆ.
ರೈತರ ಪ್ರತಿಭಟನೆ ಮತ್ತು ಗಣರಾಜ್ಯೋತ್ಸವದ ಘರ್ಷಣೆಯ ಮಧ್ಯೆ “ರೈತರ ಹತ್ಯಾಕಾಂಡ” ದ ಬಗ್ಗೆ ಮಾತನಾಡುವ ಹಲವಾರು ಖಾತೆಗಳು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ತಡೆಹಿಡಿಯಲು ಸರ್ಕಾರ ಟ್ವಿಟರ್‌ಗೆ ಸೂಚಿಸಿತ್ತು.
ರೈತರ ಪ್ರತಿಭಟನೆ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಲು ತಮ್ಮ ಪಕ್ಷ ನಿಭಾಯಿಸಿದ ರೀತಿಯನ್ನು ಸ್ವಾಮಿ ಒಪ್ಪುವುದಿಲ್ಲ. ಜೊತೆಗೆ ಹೆಚ್ಚು ಚರ್ಚಾಸ್ಪದ ಕೃಷಿ ಕಾಯ್ದೆಗಳನ್ನು “ತಮ್ಮ ರಾಜ್ಯಗಳಿಗೆ ಅನುಷ್ಠಾನಗೊಳಿಸುವಂತೆ ಕೇಂದ್ರಕ್ಕೆ ಬರೆಯುವ ರಾಜ್ಯಗಳಿಗೆ ಮಾತ್ರ ಅನ್ವಯಿಸಬೇಕೆಂದು ಸ್ವಾಮಿ ಹೇಳಿರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಬಿಜೆಪಿ ಸಂಸದರು ಬೆಂಬಲ ಸೂಚಿಸಿದ್ದಾರೆ..

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   "ನಿಮಗೆ ನಾಚಿಕೆಯಾಗಬೇಕು, ನಿಮ್ಮ ವರ್ತನೆಗೆ ನಾನು ಕ್ಷಮೆಯಾಚಿಸ್ತೇನೆ : 'ಕಾಶ್ಮೀರ ಫೈಲ್ಸ್' ಬಗ್ಗೆ ಇಸ್ರೇಲಿ ಚಲನಚಿತ್ರ ನಿರ್ಮಾಪಕನ ಟೀಕೆಗಳಿಗೆ ಇಸ್ರೇಲಿ ರಾಯಭಾರಿ ತೀವ್ರ ವಾಗ್ದಾಳಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement