ದೆಹಲಿ ಹಿಂಸಾಚಾರ: ಘಟನಾ ಸ್ಥಳಕ್ಕೆ ಆರೋಪಿಗಳು

ದೆಹಲಿ: ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ದೀಪ್‌ ಸಿಧು ಹಾಗೂ ಇಕ್ಬಾಲ್‌ ಸಿಂಗ್‌ ಅವರನ್ನು ದೆಹಲಿ ಪೊಲೀಸರು ಶನಿವಾರ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲು ಕೆಂಪು ಕೋಟೆಗೆ ಇಬ್ಬರು ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇಲ್ಲಿನ ಚಾಣಕ್ಯಪುರಿಯ ಅಪರಾಧ ದಳ ಕೇಂದ್ರ ಕಚೇರಿಯಿಂದ ತನಿಖೆ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಫೆ.೧೦ರಂದು ಇಕ್ಬಾಲ್‌ ಸಿಂಗ್‌ನನ್ನು ಬಂಧಿಸಲಾಗಿದ್ದು, ಇದಕ್ಕೂ ಮುಂಚೆ ದೀಪ್‌ ಸಿಧುವನ್ನು ಬಂಧಿಸಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಸಚಿವ ಬಾಬಾ ಸಿದ್ದಿಕಿ ಸಾವಿನ ಬಗ್ಗೆ ತಿಳಿದುಕೊಳ್ಳಲು ಆಸ್ಪತ್ರೆ ಹೊರಗೆ 30 ನಿಮಿಷ ಕಾದಿದ್ದ ಹತ್ಯೆಯ ಪ್ರಮುಖ ಆರೋಪಿ...!

ನಿಮ್ಮ ಕಾಮೆಂಟ್ ಬರೆಯಿರಿ

advertisement