ಸೂಕ್ತ ಸಮಯಕ್ಕೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಪಟ್ಟ: ಅಮಿತ್‌ ಶಾ

ನದೆಹಲಿ: ಸೂಕ್ತ ಸಂದರ್ಭದಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನ ನೀಡಲಾಗುವುದು ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜಮ್ಮು-ಕಾಶ್ಮೀರ ಪುನರ್‌ ಸಂಘಟನೆ ತಿದ್ದುಪಡಿ ಮಸೂದೆಗೂ ರಾಜ್ಯದ ಸ್ಥಾನ ನೀಡುವುದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.
ಅವರು ಲೋಕಸಭೆಯಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನ ನೀಡುವುದರ ಬಗ್ಗೆ ಸಂಸದರಲ್ಲಿ ಯಾವುದೇ ಸಂದೇಹಬೇಡ. ಸೂಕ್ತ ಸಮಯದಲ್ಲಿ ರಾಜ್ಯದ ಸ್ಥಾನ ನೀಡಲಾಗುವುದು. ಇದಕ್ಕೂ ಜಮ್ಮು-ಕಾಶ್ಮೀರ ಪುನರ್‌ ಸಂಘಟನೆ ತಿದ್ದುಪಡಿ ಮಸೂದೆಗೂ ತಳಕು ಹಾಕುವುದು ಬೇಡ ಎಂದರು.
೩೭೦ನೇ ವಿಧಿಯನ್ನು ರದ್ದುಪಡಿಸಿ ಈಗ ಕೇವಲ 17 ತಿಂಗಳಾಗಿದೆ. ಅದಕ್ಕೆ ಪ್ರತ್ಯೇಕ ಖಾತೆಗೆ ಕೆಲವರು ಆಗ್ರಹಿಸುತ್ತಿದ್ದಾರೆ. ಆದರೆ ಕಳೆದ ೭೦ ವರ್ಷಗಳಿಂದ ಅಧಿಕಾರದಲ್ಲಿದ್ದವರು ಯಾಕೆ ಖಾತೆ ಮಾಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   1984ರ ಸಿಖ್ ವಿರೋಧಿ ದಂಗೆ ಪ್ರಕರಣ; ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನಕುಮಾರ ದೋಷಿ

ನಿಮ್ಮ ಕಾಮೆಂಟ್ ಬರೆಯಿರಿ

advertisement