ಉತ್ತರಾಖಂಡ ದುರಂತ: ೪೧ ಶವಗಳ ಪತ್ತೆ

ಉತ್ತರಾಖಂಡದ ಚಮೋಲಿಯಲ್ಲಿ ಹಿಮಬಂಡೆ ಕುಸಿದು ಉಂಟಾದ ಪ್ರವಾಹ ದುರಂತದಲ್ಲಿ ಈವರೆಗೆ ೪೧ ಶವಗಳನ್ನು ಹೊರತೆಗೆಯಲಾಗಿದೆ.
ರವಿವಾರ ಮಧ್ಯಾಹ್ನದ ವೇಳೆಗೆ ೪೧ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯ ತೀವ್ರಗೊಳಿಸಲಾಗಿದೆ.
ಫೆ.೭ರಂದು ಹಿಮಬಂಡೆ ಕುಸಿದು ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಋಷಿಗಂಗಾ ವಿದ್ಯುತ್‌ ಯೋಜನೆ ಕಾಮಗಾರಿ ಹಾನಿಗೊಳಗಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾರ್ಯ ಭರದಿಂದ ನಡೆದಿದೆ. ಒಟ್ಟು ೧೬೫ ಜನರು ನಾಪತ್ತೆಯಾಗಿದ್ದು, ಅವರು ಬದುಕಿದ ಸಾಧ್ಯತೆ ಕ್ಷೀಣಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಡಿಸಿಎಂ ಏಕನಾಥ ಶಿಂಧೆಯನ್ನು ದ್ರೋಹಿ ಎಂದು ಕರೆದ ಕುನಾಲ್‌ ಕಾಮ್ರಾ ; ಕಾರ್ಯಕ್ರಮ ನಡೆದ ಸ್ಥಳ ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು

ನಿಮ್ಮ ಕಾಮೆಂಟ್ ಬರೆಯಿರಿ

advertisement