ಫೆ.೧೫ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯ

ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ (ಫೆ.೧೫ರ ಮಧ್ಯರಾತ್ರಿ)ಮಧ್ಯರಾ‌ತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ.
ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ.
ಶುಲ್ಕ ಸಂಗ್ರಹದ ವ್ಯಾಪ‍್ತಿಗೆ ಬರುವ ಎಲ್ಲ ಹೆದ್ದಾರಿ, ರಸ್ತೆಗಳನ್ನು ‘ಫಾಸ್ಟ್ಯಾಗ್‌ ಮಾರ್ಗ’ ಎಂದು ಪರಿಗಣಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008ರ ಅನ್ವಯ, ಫಾಸ್ಟ್ಯಾಗ್ ಇಲ್ಲದ ಅಥವಾ ಕಾರ್ಯನಿರತ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು, ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ಆದೇಶ ತಿಳಿಸಿದೆ.
ಈ ವರ್ಷದ ಜನವರಿ 1ರಿಂದಲೇ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದನ್ನು ಕಡ್ಡಾಯ ಮಾಡಲಾಗಿತ್ತು. ಬಳಿಕ ನಂತರ ಅದನ್ನು ಫೆಬ್ರುವರಿ 15ಕ್ಕೆ ಮುಂದೂಡಲಾಗಿತ್ತು. ಫಾಸ್ಟ್ಯಾಗ್‌ ಬಳಕೆ ಕಡ್ಡಾಯವಾಗುವಂತೆ ಎಲ್ಲ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದೂ ಸಚಿವಾಲಯವು, ರಾಜ್ಯಗಳ ಸಂಬಂಧಿತ ಇಲಾಖೆಗಳಿಗೆ ಸೂಚಿಸಿತ್ತು.
ಭೂಸಾರಿಗೆ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಈ ಸಂಬಂಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಸದ್ಯ, ಫಾಸ್ಟ್ಯಾಗ್ ಬಳಕೆದಾರರ ಸಂಖ್ಯೆ 2.54 ಕೋಟಿ ಇದೆ. ಒಟ್ಟು ಶುಲ್ಕದ ಶೇ 80ರಷ್ಟು ಈ ಮೂಲಕ ಸಂಗ್ರಹವಾಗಲಿದೆ. ಫಾಸ್ಟ್ಯಾಗ್‌ ಮೂಲಕ ಸಂಗ್ರಹವಾಗುವ ಶುಲ್ಕದ ಮೊತ್ತ ಪ್ರತಿದಿನ 89 ಕೋಟಿ ರೂ.ಗಡಿಯನ್ನು ದಾಟಿದೆ. ಎನ್‌ಎಚ್‌ಎಐ ಮೂಲಗಳ ಪ್ರಕಾರ, ಇನ್ನೂ ಎರಡು ಕೋಟಿಯಷ್ಟು ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಮಾಜಿ ಕಾಂಗ್ರೆಸ್ ನಾಯಕರಿಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ: ಜೈವೀರ್ ಶೇರ್ಗಿಲ್ ಹೊಸ ವಕ್ತಾರ, ಕ್ಯಾಪ್ಟನ್‌ ಅಮರಿಂದರ್ ಸಿಂಗ್, ಸುನೀಲ್ ಜಾಖರಗೆ ಕಾರ್ಯಕಾರಿ ಸದಸ್ಯತ್ವ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement