ಬೆಳಗಾವಿ: ನಾನು ಮನಸು ಮಾಡಿದರೆ ೨೪ ಗಂಟೆಗಳಲ್ಲಿ ಐದು ಕಾಂಗ್ರೆಸ್ ಶಾಸಕರ ರಾಜಿನಾಮೆ ಕೊಡಿಸಬಲ್ಲೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ಬಿಜೆಪಿಗೆ ೧೭ ಶಾಸಕರು ಖುಷಿಯಿಂದ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಬೇಕೆನಿಸಿದರೆ ೨೪ ತಾಸುಗಳಲ್ಲಿ ಐವರು ಕಾಂಗ್ರೆಸ್ ಶಾಸಕರ ರಾಜಿನಾಮೆ ಕೊಡಿಸಬಲ್ಲೆ ಎಂದರು.
ಕಾಂಗ್ರೆಸ್ನ ಉನ್ನತ ಹಂತದ 5 ನಾಯಕರು ನಮ್ಮ ಜತೆ ಬರಲು ತಯಾರಿದ್ದಾರೆ. ಬೇಕಾದರೆ ಅಂಥವರನ್ನು ಬಿಜೆಪಿಗೆ ಕೆರೆ ತರುತ್ತೇನೆ. ಅವರ ಹೆಸರು ಕೇಳಿದರೆ ಗಾಬರಿ ಆಗುತ್ತೀರಿ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ 20 ವರ್ಷ ಶಾಸಕನಾಗಿ ಇದ್ದೆ. ಅಷ್ಟೂ ವರ್ಷ ಕಾಂಗ್ರೆಸ್ನವರು ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಯಲ್ಲಿ ಸ್ವತಂತ್ರವಾಗಿ ಇದ್ದೇನೆ ಎಂದು ರಮೇಶ್ ಜಾರಕಹೊಳಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ