ಶೇಮ್‌ ಆನ್‌ ಯು: ಮ್ಯಾನ್ಮಾರ್‌ನಲ್ಲಿ ಚೀನಾ ವಿರುದ್ಧ ಪ್ರತಿಭಟನೆ

ಮ್ಯಾನ್ಮಾರ್‌: ಒಮ್ಮತದಿಂದ ‘ಶೇಮ್ ಆನ್ ಯು ಚೀನಾ’ ಎಂದು ಕೂಗುತ್ತ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಕ್ಕೆ ಬೀಜಿಂಗ್ ಬೆಂಬಲ ನೀಡುವುದನ್ನು ವಿರೋಧಿಸಿ ಯುವಕರು ಭಾನುವಾರ ಯಾಂಗೊನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮ್ಯಾನ್ಮಾರ್ ನೌ ಪ್ರಕಾರ, ಯುವ ಪ್ರತಿಭಟನಾಕಾರರು ಕೈಯಿಂದ ಮತ್ತು ಮುದ್ರಿತ ಫಲಕಗಳನ್ನು ಹಿಡಿದಿಕೊಂಡು ಚೀನಾವು ಮ್ಯಾನ್ಮಾರ್‌ ಸೈನ್ಯಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಫ ಇನ್ ಚೀನಾ ‘.

ಫೆಬ್ರವರಿ 1 ರಂದು, ಮ್ಯಾನ್ಮಾರ್‌ನ ಮಿಲಿಟರಿ ದಂಗೆಯೊಂದನ್ನು ನಡೆಸಿ, ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಯ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರ ಉರುಳಿಸಿತ್ತು.

ಮಿಲಿಟರಿ ದಂಗೆ ವಿರುದ್ಧ ಜಾಗತಿಕ ಖಂಡನೆ ಇದ್ದರೂ, ಚೀನಾವು ಮೌನವಾಗಿದೆ. ಮ್ಯಾನ್ಮಾರ್‌ನಲ್ಲಿ ಏನಾಗಿದೆ ಎಂದು ನಾವು ಗಮನಿಸಿದ್ದೇವೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಫೆಬ್ರವರಿ 1 ರಂದು ಬೀಜಿಂಗ್ನಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement