ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ ಪ್ರಧಾನಿ: ಶಿವಸೇನೆ ಆರೋಪ

ಮುಂಬೈ: ಕೃಷಿ ಕಾನೂನುಗಳನ್ನು ಖಂಡಿಸಿ ಹೋರಾಟ ನಡೆಸುತ್ತಿರುವ ರೈತರಿಗೆ ಪ್ರಧಾನಿ “ಆಂದೋಲನಜೀವಿಗಳುʼ ಎಂದು ಕರೆದಿರುವುವುದು ದೇಶದ ಸ್ವಾತಂತ್ರ್ಯ ಹೋರಾಟ ಮಾಡಿದವರಿಗೂ ಮಾಡಿದ ಅವಮಾನ ಎಂದು ಶಿವಸೇನೆ ಆರೋಪ ಮಾಡಿದೆ.
ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಪ್ರಧಾನಿ ಮೋದಿ ಅವರು ದೇಶದ ಆಂದೋಲನಗಳನ್ನು ಗೇಲಿ ಮಾಡಿದ್ದಾರೆ. ಬಿಜೆಪಿ ತುರ್ತು ಪರಿಸ್ಥಿತಿಯಿಂದ ಅಯೋಧ್ಯೆ ಚಳುವಳಿಯವರೆಗೆ, ಹಣದುಬ್ಬರದಿಂದ ಕಾಶ್ಮೀರದಿಂದ ಆರ್ಟಿಕಲ್-370 ತೆಗೆದುಹಾಕುವವರೆಗೆ ತನ್ನ ಆಂದೋಲನವನ್ನು ಮುಂದುವರಿಸಿದೆ. ಇದೇ ಬಿಜೆಪಿಯ ಪ್ರಧಾನಿ ಮೋದಿ ಪ್ರತಿಭಟನಾಕಾರರನ್ನು ‘ಆಂದೋಲನಜೀವಿ’ ಎಂದು ಲೇವಡಿ ಮಾಡಿರುವುದು ಸ್ವಾತಂತ್ರ್ಯ ಚಳವಳಿಯನ್ನು ಸಹ ಅವಮಾನಿಸಿದಂತಾಗಿದೆ ಎಂದು ಹೇಳಿದೆ.
‘ಆಂದೋಲನಜೀವಿʼ ಎಂಬ ಪದವನ್ನು ಪ್ರಸ್ತಾಪಿಸಿದ ಪ್ರಧಾನಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ತಿಳಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ನಿಮ್ಮ ಕಾಮೆಂಟ್ ಬರೆಯಿರಿ

advertisement