ಜಪಾನ್‌ನಲ್ಲಿ ಭೂಕಂಪನಕ್ಕೆ ೧೨೦ ಜನರಿಗೆ ಗಾಯ

ಈಶಾನ್ಯ ಜಪಾನ್‌ನಲ್ಲಿ ಶನಿವಾರ ತಡರಾತ್ರಿ ಭೂಕಂಪನ ಸಂಭವಿಸಿದ್ದು, ಸುಮಾರು ೧೨೦ ಜನರು ಗಾಯಗೊಂಡಿರುವುದು ವರದಿಯಾಗಿದೆ.
ಭೂ ಕಂಪನದಿಂದಾಗಿ ಬುಲೆಟ್‌ ರೈಲು ಮಾರ್ಗಗಳು, ಹಲವು ಕಟ್ಟಡಗಳು, ರಸ್ತೆಗಳು ಹಾನಿಗೀಡಾಗಿವೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ ೭.೩ ರಷ್ಟು ದಾಖಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಜೀವಹಾನಿಯಾಗಿರುವುದು ವರದಿಯಾಗಿಲ್ಲ ಸಮುದ್ರದ ಆಳದಲ್ಲಿ ಭೂ ಕಂಪನದ ಕೇಂದ್ರ ಪತ್ತೆಯಾಗಿದ್ದು, ಯಾವುದೇ ಸುನಾಮಿ ಸಂಭವಿಸಿಲ್ಲ. ರವಿವಾರ ಬುಲೆಟ್‌ ರೈಲು ಸೇವೆ ರದ್ದುಗೊಳಿಸಲಾಗಿದೆ ಎಂದು ಜಪಾನ್‌ ಪೂರ್ವ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement