ಟೂಲ್‌ಕಿಟ್‌ ಆರೋಪಿಗಳಿಗೆ ಭಾರತದ ಘನತೆ ಹಾಳು ಮಾಡುವ ಉದ್ದೇಶವಿತ್ತು: ದೆಹಲಿ ಪೊಲೀಸ್‌

ದೆಹಲಿ: ಟೂಲ್‌ಕಿಟ್‌ ರಚನೆ ಮಾಡಿದ ದಿಶಾ ರವಿ, ನಿಕಿತಾ ಜೇಕಬ್‌ ಹಾಗೂ ಶಾಂತನು ಅವರಿಗೆ ಭಾರತದ ಘನತೆಗೆ ಚ್ಯುತಿ ತರುವ ಉದ್ದೇಶವಿತ್ತು ಎಂದು ದೆಹಲಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ, ನಿಕಿತಾ ಹಾಗೂ ಶಾಂತನು ಪಾಲ್ಗೊಳ್ಳುವಿಕೆ ದೃಢಪಟ್ಟಿದೆ. ಭಾರತದ ಚಿತ್ರಣವನ್ನು ಕಳಂಕಿತಗೊಳಿಸುವುದು ಅವರ ಉದ್ದೇಶವಾಗಿತ್ತು. ಟೂಲ್‌ಕಿಟ್‌ ಹರಡಲು ದಿಶಾ ಅವರು ರಚಿಸಿದ ವ್ಯಾಟ್ಸಪ್‌ ಗ್ರೂಪನ್ನು ಅಳಿಸಿದ್ದಾರೆ. ದಿಶಾ ಟೆಲಿಗ್ರಾಮ್‌ ಮೂಲಕ ಟೂಲ್‌ಕಿಟ್‌ ಅನ್ನು ಗ್ರೇಟಾ ಥನ್‌ಬರ್ಗ್‌ ಅವರಿಗೆ ಕಳಿಸಿದ್ದಾರೆ. ಖಲಿಸ್ತಾನ ಪರ ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌ ಆಯೋಜಿಸಿದ್ದ ಜೂಮ್‌ ಮೀಟಿಂಗ್‌ನಲ್ಲಿ ನಿಕಿತಾ ಹಾಗೂ ಶಾಂತನು ಪಾಲ್ಗೊಂಡಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ದಿಶಾ ರವಿ ಬೆಂಗಳೂರಿನಿಂದ ಬಂಧನಕ್ಕೊಳಗಾದ ನಂತರ, ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಿಕಿತಾ ಮತ್ತು ಶಾಂತನು ಎಂಬ ಇಬ್ಬರು ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement