ವಾಟ್ಸಅಪ್‌‌‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಹೊಸ ಗೌಪ್ಯತೆ ನೀತಿ ಜಾರಿಗೆ ತರಲು ಮುಂದಾಗಿದ್ದ ಮೆಸೆಜಿಂಗ್‌ ಅಪ್ಲಿಕೇಶನ್‌ ವ್ಯಾಟ್ಸಪ್‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ, ಹಣಕ್ಕಿಂತ ನಾಗರಿಕರ ಗೌಪ್ಯತೆ ಮುಖ್ಯವಾಗಿದೆ ಎಂದು ಅಭಿಪ್ರಾಯಟ್ಟಿದೆ.
ಕೇಂದ್ರ ಸರಕಾರ ಹಾಗೂ ವ್ಯಾಟ್ಸಪ್‌ಗೆ ನೊಟೀಸ್‌ ನೀಡಿದ ನ್ಯಾಯಾಲಯ, ನ್ಯಾಯಾಲಯವು ಜನರ ಗೌಪ್ಯತೆ ಬಗ್ಗೆ ಗಂಭೀರ ಕಾಳಜಿ ಹೊಂದಿದೆ. ಜನರ ಗೌಪ್ಯತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದೆ.
ಮೆಸೇಜಿಂಗ್ ಅಪ್ಲಿಕೇಶನ್‌ನ ಯುರೋಪಿಯನ್ ಬಳಕೆದಾರರಿಗೆ ಹೋಲಿಸಿದರೆ ಭಾರತೀಯರಿಗೆ ಗೌಪ್ಯತೆಯ ಕಡಿಮೆ ಗುಣಮಟ್ಟವನ್ನು ಆರೋಪಿಸಿ ಹೊಸ ಮನವಿಗೆ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಸರ್ಕಾರ ಮತ್ತು ಮೆಸೇಜಿಂಗ್ ಅಪ್ಲಿಕೇಶನ್‌ ವ್ಯಾಟ್ಸಪ್‌ ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಕರ್ಮಣ್ಯ ಸಿಂಗ್ ಸರೀನ್ ಸಲ್ಲಿಸಿದ ಮಧ್ಯಂತರ ಅರ್ಜಿಯ ಕುರಿತು ಸರ್ಕಾರ ಮತ್ತು ಫೇಸ್‌ಬುಕ್ ಒಡೆತನದ ಆ್ಯಪ್‌ಗೆ ನೋಟಿಸ್ ನೀಡಿದೆ. ಕಂಪನಿಯ ಶತಕೋಟಿ ಮೌಲ್ಯಕ್ಕಿಂತ ಜನರ ಗೌಪ್ಯತೆ ದೊಡ್ಡದು. ಜನರು ತಮ್ಮ ಗೌಪ್ಯತೆಯನ್ನು ಹೆಚ್ಚು ಗೌರವಿಸುತ್ತಾರೆ ಎಂದು ತಿಳಿಸಿದೆ.
ತಮ್ಮ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ವಾಟ್ಸಾಪ್, ವಿಶೇಷ ಡೇಟಾ ಸಂರಕ್ಷಣಾ ಕಾನೂನನ್ನು ಹೊಂದಿರುವ ಯುರೋಪಿಯನ್ ರಾಷ್ಟ್ರಗಳನ್ನು ಹೊರತುಪಡಿಸಿ ಎಲ್ಲಾ ದೇಶಗಳಿಗೂ ಅದೇ ಗೌಪ್ಯತೆ ನೀತಿ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯುರೋಪ್ ಗೌಪ್ಯತೆ ಕುರಿತು ವಿಶೇಷ ಕಾನೂನು ಹೊಂದಿದೆ ಮತ್ತು ಭಾರತವು ಇದೇ ರೀತಿಯ ಶಾಸನವನ್ನು ಮಾಡಿದರೆ ಅದನ್ನು ನಾವು ಅನುಸರಿಸುತ್ತೇವೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಸಹೋದರ ಜಿಮ್ಮಿ ಟಾಟಾ, ಮಲತಾಯಿ ಸಿಮೋನ್ ಟಾಟಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement