ದುಬೈ: ದುಬೈನ ಬ್ಯಾಂಕ್‌ಗಳಿಂದ ಪಡೆದ ಸಾಲ ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲಕ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಂದು ಲಂಡನ್ ನ್ಯಾಯಾಲಯ ಆದೇಶಿಸಿದೆ.
ದುಬೈನ ದೊಡ್ಡ ಆರೋಗ್ಯ ಸೇವಾ ಕಂಪನಿಯಾಗಿರುವ ಎನ್‌ಎಂಸಿ ಹೆಲ್ತ್ ಕೇರ್‌ನ ಮಾಲೀಕರಾಗಿದ್ದ ಬಿ.ಆರ್ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್ ಮುಹೈರಿ ಹಾಗೂ ಸಯೀದ್ ಅಲ್ ಖುಬೈಸಿ, ಮಾಜಿ ಕಾರ್ಯ ನಿರ್ವಾಹಕ ಪ್ರಶಾಂತ್ ಮಂಗತ್ ಮತ್ತು ಇನ್ನಿಬ್ಬರು ಹಿರಿಯ ಅಧಿಕಾರಿಗಳ ಆಸ್ತಿಗಳ ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶ ಮಾಡಿದೆ.
ಲಂಡನ್ ನ್ಯಾಯಾಲಯದ ಈ ಆದೇಶದಿಂದಾಗಿ ಕೇರಳ ಸಹಿತ ವಿಶ್ವದ ವಿವಿಧ ಭಾಗಗಳಲ್ಲಿ ಇರುವ ಬಿ.ಆರ್ ಶೆಟ್ಟಿಗೆ ಸೇರಿದ ಆಸ್ತಿ ಬ್ಯಾಂಕ್ ಪಾಲಾಗಲಿದೆ. ಬಿ.ಆರ್ ಶೆಟ್ಟಿ ಒಡೆತನದ ಕಂಪನಿ ಬ್ಯಾಂಕ್ ಒಂದರಿಂದ ನಾಲ್ಕು ಬಿಲಿಯನ್ ಡಾಲರ್‌ಗೂ ಅಧಿಕ ಸಾಲ ಪಡೆದು ಹಿಂದಿರುಗಿಸಲು ವಿಫಲವಾಗಿತ್ತು. ಅಲ್ಲದೇ ನಕಲಿ ಹಣಕಾಸು ದಾಖಲೆಗಳನ್ನು ಒದಗಿಸುವ ಮೂಲಕ ಮೋಸ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಬಿ.ಆರ್.ಶೆಟ್ಟಿ ಭಾರತಕ್ಕೆ ಬಂದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ