ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ ಸೇರಿದಂತೆ ೯ ಜನರಿಗೆ ಸಮನ್ಸ್‌

ನವದೆಹಲಿ: ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ ಸೇರಿದಂತೆ ೯ ಜನರ ಮೇಲೆ ೨೦೧೬ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ ೧೫ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಲಾಗಿದೆ.
ದೆಹಲಿ ಪೊಲೀಸರು ನೀಡಿದ ಆರೋಪ ಪಟ್ಟಿಯನ್ನಾಧರಿಸಿ ನ್ಯಾಯಾಲಯ ಸಮನ್ಸ್‌ ನೀಡಿದೆ. ದೇಶದ್ರೋಹಿ ಘೋಷಣೆ ಕೂಗಿದ್ದಕ್ಕಾಗಿ ಕನ್ಹಯ್ಯಕುಮಾರ, ಉಮರ್‌ ಖಾಲಿದ್‌. ಮುನೀಬ್‌ ಹುಸೇನ್‌, ಉಮರ್‌ ಗುಲ್‌, ರಾಯಿಯಾ ರಸ್ಸೋಲ್‌, ಬಶೀರ್‌ ಭಟ್‌, ಬಶರತ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಲಾಗಿದೆ. ಬಿಜೆಪಿ ಸಂಸದ ಮಹೇಶ ಗಿರಿ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನೀಡಿದ ದೂರುಗಳನ್ನು ಆಧರಿಸಿ ವಸಂತಕುಂಜ ಉತ್ತರ ಪೊಲೀಸ್‌ ಠಾಣೆಯಲ್ಲಿ ೨೦೧೬ ಫೆಬ್ರವರಿ ೧೧ರಂದು ದೂರು ದಾಖಲಿಸಲಾಗಿತ್ತು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement