ಅಸ್ಸಾಂನಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸಿಎಎ ಪ್ರಬಲ ಅಸ್ತ್ರವಾಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ಇದ್ನು ಪರಿಣಾಮಕಾರಿ ಅಸತ್ರವಾಗಿ ಬಳಸಲಿದೆ ಎಂದು ಭಾವಿಸಲಾಗಿತ್ತು.
ಆದರೆ, ಕಾಂಗ್ರೆಸ್ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಿರಂತರ ಅಭಿಯಾನವನ್ನು ಪ್ರಾರಂಭಿಸುವ ಅವಕಾಶ ಮತ್ತು ಸಮಯ ಕಳೆದುಕೊಂಡಿದೆ ಎಂದು ಹೇಳಬಹುದು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2016 ರ ಜುಲೈ 19ರಂದು ಲೋಕಸಭೆಯಲ್ಲಿ ಮಸೂದೆಯನ್ನು ಪರಿಚಯಿಸಿತ್ತು. ಸಿಎಎಗೆ ಮೋದಿ ಸರ್ಕಾರದ ನಿರ್ಧಾರಕ್ಕೆ ರಾಹುಲ್ ಗಾಂಧಿ ಮತ್ತು ಅವರ ಪಕ್ಷದ ಪ್ರತಿಕ್ರಿಯೆ ಅಸ್ಸಾಂನಲ್ಲಿ ಜೋರಾಗಿರಬೇಕಿತ್ತು ಮತ್ತು ಪರಿಣಾಮಕಾರಿಯೂ ಇರಬೇಕಿತ್ತು. ಇಂಥ ಕಾನೂನಿಗೆ ವಿರೋಧಿಸಿದರೆ ಹೆಚ್ಚು ಬೆಂಬಲ ಸಿಗುವ ರಾಜ್ಯ ಅಸ್ಸಾಂ ಎಂಬುದು ಅದರ ಹಿಂದಿನ ಜನಾಂಗೀಯ (ಅಸ್ಸಾಂ ಮೂಲದವರು ಹಾಗೂ ಹೊರಗಿನವರು) ಇದಕ್ಕೆ ಹೆಚ್ಚು ಅವಕಾಶವನ್ನೂ ನೀಡಿತ್ತು.
ಆದರೆ ಅಸ್ಸಾಂನಲ್ಲಿ ಧ್ರುವೀಕರಿಸುವ ಈ ಶಾಸನವನ್ನು ಕಾಂಗ್ರೆಸ್ ಟೀಕಿಸುತ್ತಿದ್ದರೆ, ಅದು ಗೊಂದಲಮಯವಾಗಿದೆ. ಅಸ್ಸಾಂನಲ್ಲಿ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಸಿಎಎ ವಿರೋಧಿಸಿ ರಾಹುಲ್ ಗಾಂಧಿಯವರು ಪಕ್ಷದ ರಾಜ್ಯ ನಾಯಕ ಗೌರವ್ ಗೊಗೊಯ್ ಅವರೊಂದಿಗೆ ಸೇರಿ ‘ಆಕ್ಸೋಮ್ ಬಾಸಾನ್ ಅಹೋಕ್’ (ಅಸ್ಸಾಂ ಅನ್ನು ಉಳಿಸೋಣ) ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಅಗತ್ಯವಿದ್ದಾಗ ಮಾಡದೆ ವಿಳಂಬ ಮಾಡಿದ್ದರಿಂದ ಕಾಂಗ್ರೆಸ್‌ಗೆ ನಿರೀಕಿಸಿದಷ್ಟು ಲಾಭ ಸಿಗುವ ಸಾಧ್ಯತೆ ಕಡಿಮೆ.
ಬ್ರಹ್ಮಪುತ್ರ ಮತ್ತು ಬರಾಕ್ ಕಣಿವೆಗಳಲ್ಲಿನ ಅಭಿಯಾನದ ವಿಧಾನದಲ್ಲಿನ ವ್ಯತ್ಯಾಸದಿಂದಾಗಿ ಈ ವಿಷಯದ ಬಗ್ಗೆ ಪಕ್ಷದಲ್ಲಿಯೇ ಗೊಂದಲಗಳಿವೆ. ಮುಖ್ಯವಾಗಿ, ಸಿಎಎ ವಿಷಯವು ಅಸ್ಸಾಂನ ಮತದಾರರನ್ನು ಬಿಜೆಪಿ ವಿರುದ್ಧ ತಿರುಗಿಸಿಲ್ಲ ಎಂಬುದು 2019 ರ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಬಂಗಾಳಿ ಪ್ರಾಬಲ್ಯದ ಬರಾಕ್ ಕಣಿವೆಯಲ್ಲಿ ಕಾಂಗ್ರೆಸ್‌ನ ಸಿಎಎ ವಿರೋಧಿ ಅಭಿಯಾನಕ್ಕೆ ಜನ ಹೆಚ್ಚು ಸ್ವಾಗತ ನೀಡಲಿಲ್ಲ.ಅಲ್ಲದೆ, ಕಾಂಗ್ರೆಸ್ ರಣತಂತ್ರವನ್ನು ಕಾಂಗ್ರೆಸ್‌ಗೆ ತಿರುಗಿ ಸಿರುವ ಬಿಜೆಪಿ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಸಿಎಎ ಕಾನೂನಿನ ಚರ್ಚೆಯನ್ನು ಮತ್ತೆ ಜನರ ಮುಂದೆ ತಾನೇ ತಂದಿದೆ. ಇದು ಕಾಂಗ್ರೆಸ್ ಅನ್ನು ಅವಕಾಶವಾದಿ ರಾಜಕಾರಣ ಮಾಡುತ್ತಿರುವಂತೆ ಬಿಂಬಿಸುತ್ತಿದೆ. ಕಾಂಗ್ರೆಸ್ ತಡವಾಗಿ ಎಚ್ಚರಗೊಂಡಿದೆ.
ಬಿಜೆಪಿ ಗುರಿಯಾಗಿಸಲು ಕಾಂಗ್ರೆಸ್‌ಗೆ ಅಸ್ಸಾಂ ಫಲವತ್ತಾದ ನೆಲ: ಅಸ್ಸಾಂ ಜನಾಂಗೀಯ-ಜನಾಂಗೀಯವಲ್ಲದ ವಿಭಜನೆಯ ಸುದೀರ್ಘ, ತೊಂದರೆಗೀಡಾದ ಮತ್ತು ಹಿಂಸಾತ್ಮಕ ಇತಿಹಾಸವನ್ನು ಹೊಂದಿರುವ ರಾಜ್ಯ. ಇದು ಮೂಲನಿವಾಸಿಗಳಲ್ಲಿ ಹೊರಗಿನವರ ಬಗ್ಗೆ ವಿರೋಧಿ ಮನೋಭಾವ ಹೊಂದಿದೆ. ಈ ಭಾವನೆಯು ಧರ್ಮ, ಪ್ರದೇಶ ಅಂದರೆ ಸ್ಥಳೀಯ ಅಸ್ಸಾಮಿಯರಲ್ಲದ ಹೊರಗಿನ ಯಾವುದೇ ವಸಾಹತುಗಾರರಿಗೂ ಅನ್ವಯವಾಗುತ್ತದೆ. ಈ ಘರ್ಷಣೆಯು ಜನಾಂಗೀಯ ಮತ್ತು ಭಾಷಾ ಮಾರ್ಗಗಳಲ್ಲಿದೆಯೇ ಹೊರತು ಕೇವಲ ಧರ್ಮದ ಆಧಾರದಲ್ಲಿ ಇಲ್ಲವಾಗಿತ್ತು. ಅಸ್ಸಾಂನಲ್ಲಿ ಕೇವಲ ಬಾಂಗ್ಲಾದೇಶದಿಂದ ಬಂದ ಮುಸ್ಲಿಮರ ಬಗ್ಗೆ ಮಾತ್ರ ಅಸಮಾಧಾನವಿರಲಿಲ್ಲ. ‘ಹೊರಗಿನವರು’ ಅಂದರೆ ಬಾಂಗ್ಲಾದೇಶಿಗಳಿಂದ ಬಂದ ಬಂಗಾಳಿ ಹಿಂದೂಗಳು, ಬಿಹಾರಿಗಳು, ಪಂಜಾಬಿಗಳು ಮತ್ತು ಇತರ ವಲಸಿಗರ ವಿರುದ್ಧವೂ ಅಸಮಾಧಾನ ಹೊಂದಿದ್ದರು..
ಆದರೆ ಈಗ ಕಾಲ ಬದಲಾಗುತ್ತಿದೆ. ಈಗ ಜನರ ವಲಸೆ ರಾಜಕೀಯ ಈಗ ಸಿಎಎ ರಾಜಕೀಯವಾಗಿದೆ. ಸ್ವಲ್ಪ ಸಮಯದಿಂದ ಅಸ್ಸಾಂ ತನ್ನ ಗತಕಾಲದ ಸಂಘರ್ಷವನ್ನು ಮೀರಿದ ಹಾದಿ ಹಿಡಿಯುತ್ತಿದೆ, ಕೆಲವು ಗಾಯಗಳು ಗುಣವೂ ಆಗಿದೆ. ಆದರೆ 2015 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್‌ಆರ್‌ಸಿ) ನವೀಕರಿಸುವ ಸುಪ್ರೀಂ ಕೋರ್ಟ್-ಮೇಲ್ವಿಚಾರಣೆ ಪ್ರಕ್ರಿಯೆಯು ಅವುಗಳನ್ನು ಮತ್ತೆ ತೆರೆಯಿತು, ಮತ್ತು ಸಿಎಎ ಜಾರಿಯಿಂದ ಇದು ಮತ್ತೊಂದು ಸ್ತರ ತಲುಪಿತು.
ಹಾಗೆ ನೋಡಿದರೆ ಎಲ್ಲಾ ಹೊರಗಿನವರನ್ನು ಗುರುತಿಸಲು ಸ್ಥಳೀಯ ಅಸ್ಸಾಮಿಗಳಿಗೆ ಎನ್‌ಆರ್‌ಸಿ ಕಾನೂನು ದೀರ್ಘಕಾಲದ ಬೇಡಿಕೆಯಾಗಿತ್ತು. ಆದರೆ ಸಿಎಎ ಜಾರಿ ‘ಹೊರಗಿನವರನ್ನು’ ಧಾರ್ಮಿಕ ವರ್ಗಗಳಾಗಿ ವಿಂಗಡಿಸಿ ಮತ್ತು ಎಲ್ಲಾ ಮುಸ್ಲಿಮೇತರ ವಲಸಿಗರಿಗೆ ಪೌರತ್ವವನ್ನು ನೀಡುವುದನ್ನು ಹೇಳುತ್ತದೆ. ಸಿಎಎ ಅಸ್ಸಾಂನ ಸಂಪೂರ್ಣ ಜನಾಂಗೀಯ ಆಂದೋಲನವನ್ನು ಬೇರೆ ತರಹ ನಿರೂಪಿಸುತ್ತದೆ – ಅದು ಅಸ್ಸಾಮಿಯೇತರರ ಭಾವನೆಯನ್ನೂ ರಾಜ್ಯದಲ್ಲಿ ನೆಲೆಸುವಂತೆ ಮಾಡುತ್ತದೆ.ಅಂದರೆ, ಹೊರಗಿನ ಮುಸ್ಲಿಮೇತರ ಮೂಲದವರಿಗೆ ಕಾನೂನುಬದ್ಧವಾಗಿ ನಾಗರಿಕರಾಗಲು ಅವಕಾಶ ನೀಡುತ್ತದೆ.ಇದು ಮೂಲ ಅಸ್ಸಾಮಿಗಳ ಹೋರಾಟಕ್ಕೆ ಒಂದರ್ಥದಲ್ಲಿ ತದ್ವಿರುದ್ಧವಾದ ಕಾನೂನು. ಆದ್ದರಿಂದ,ಹೊಸ ಪೌರತ್ವ ಕಾನೂನನ್ನು ತರುವ ಮೂಲಕ ಬಿಜೆಪಿ ಅಸ್ಸಾಂನಲ್ಲಿ ಬೆಂಕಿಯೊಂದಿಗೆ ಆಟವಾಡಿದೆ ಎಂದೇ ಹೇಳಬಹುದು. ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ನಿಜವಾಗಿಯೂ ಕುಂಠಿತಗೊಳಿಸಬಹುದಾದ ಕಾನೂನುನೆಂದರೆ ಸಿಎಎ ಎಂದು ಹೇಳಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಮತ್ತು ಹಿಮಾಂಶು ಬಿಸ್ವಾಸ್ ಶರ್ಮಾ ಅವರ ಚುನಾವಣಾ ರಣತಂತ್ರದ ಹೊರತಾಗಿ ಕಾಂಗ್ರೆಸ್ಸಿಗೆ ಇರುವ ಅವಕಾಶ ಇದೇ ಸಿಎಎ ಆಗಿತ್ತು.ಆದರೆ ಸ್ವತಂತ್ರ ಭಾರತದ ಬಹುಪಾಲು ಸಮಯ ಅಸ್ಸಾಂ ಅನ್ನು ಆಳಿದ್ದರೂ ಅಸ್ಸಾಮಿಗಳ ಉದ್ದೇಶ ಹಾಗೂ ಅವರ ಸಂಘರ್ಷವನ್ನು ಅರ್ಥಮಾಡಿಕೊಳ್ಳಲು ಈಗಲೂ ಕಾಂಗ್ರೆಸ್ ವಿಫಲವಾಗಿದೆ. ಬಿಜೆಪಿ ಎನ್‌ಆರ್‌ಸಿ ಹಾಗೂ ಸಿಎಎ ಕುರಿತು ಮಾಡಿದ ರಣತಂತ್ರದ ಬಗ್ಗೆ ಪ್ರತಿ ರಣತಂತ್ರ ಹೆಣೆಯುವಲ್ಲಿಯೂ ಅದು ಗೊಂದಲದಿಂದ ಹೊರಬಂದಂತೆ ಕಾಣುತ್ತಿಲ್ಲ. ಅದಕ್ಕೆ ನಿರ್ದಿಷ್ಟ ಚುನಾವಣಾ ರಣತಂತ್ರ ಹಾಗೂ ಮಾರ್ಗಸೂಚಿ ಎರಡೂ ಇದ್ದಂತೆ ಕಾಣುತ್ತಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ