ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ: ಭಾಗ್ವತ್‌-‌ ಚಕ್ರವರ್ತಿ ಭೇಟಿಗೆ ಮಹತ್ವ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ರಾಸ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್‌ ಬಾಲಿವುಡ್‌ ತಾರೆ ಮಿಥುನ್‌ ಚಕ್ರವರ್ತಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಿಥುನ್‌ ಮನೆಯಲ್ಲಿ ಉಪಾಹಾರ ಮಾಡಿದ ಭಾಗವತ್‌ ಕೆಲ ಹೊತ್ತು ಚರ್ಚಿಸಿದರು. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಮೋಹನ್‌ ಭಾಗವತ್‌ ಅವರೊಂದಿಗೆ ಹಲವು ವರ್ಷಗಳಿಂದ ನನಗೆ ಆಧ್ಯಾತ್ಮಿಕ ಸಂಬಂಧವಿದೆ. ಆಶೀರ್ವಾದ ಹಾಗೂ ಪ್ರೀತಿಯ ಮಾತುಗಳನ್ನು ಬಿಟ್ಟರೇ ಬೇರೇನೂ ಇರಲಿಲ್ಲ ಎಂದು ಮಿಥುನ್‌ ಚಕ್ರವರ್ತಿ ಹೇಳಿದ್ದಾರೆ.
ಮೋಹನ್‌ ಭಾಗವತ ನನಗೆ ನಾಗಪುರಕ್ಕೆ ಬರಲು ಆಹ್ವಾನಿಸಿದ್ದು, ನಾನು ಕುಟುಂಬ ಸಮೇತನಾಗಿ ನಾಗಪುರಕ್ಕೆ ಹೋಗಲು ಬಯಸಿದ್ದೇನೆ ಎಂದು ಸಿನೆಮಾ ತಾರೆ ಮಿಥುನ್‌ ನುಡಿದರು.
ಮಿಥುನ್‌ ಬಿಜೆಪಿ ಸೇರಲು ಆಸಕ್ತಿ ಹೊಂದಿರದಿದ್ದರೂ ಅವರನ್ನು ಪ್ರಚಾರಕ್ಕೆ ಕರೆಸಲು ಬಿಜೆಪಿ ಉತ್ಸುಕವಾಗಿದೆ. ಮಿಥುನ್‌ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರಚಾರ ಮಾಡಿದರೆ ಪಕ್ಷಕ್ಕೆ ದೊಡ್ಡ ಸಹಾಯವಾಗುತ್ತದೆ ಎಂಬುದು ಬಿಜೆಪಿ ಮುಖಂಡರ ಅಭಿಲಾಷೆಯಾಗಿದೆ.
ಅವಕಾಶವನ್ನು ಕಳೆದುಕೊಳ್ಳಲು ಬಯಸದ ಬಿಜೆಪಿ ಮಿಥುನ್‌ ಹಾಗೂ ಭಾಗವತ್‌ ಅವರ ಭೇಟಿಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದೆ. ಏಪ್ರಿಲ್‌-ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಒಟ್ಟಾಗಿ ಕಾರ್ಯತಂತ್ರ ರೂಪಿಸುತ್ತಿವೆ.
೨೦೧೪ರಲ್ಲಿ ತೃಣಮೂಲ ಟಿಕೇಟ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಮಿಥುನ್‌, ೨೦೧೬ರಲ್ಲಿ ಆರೋಗ್ಯದ ಕಾರಣ ನೀಡಿ ರಾಜಿನಾಮೆ ನೀಡಿ ಪಕ್ಷ ತೊರೆದಿದ್ದಾರೆ. ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ ಕಂಪನಿಯ ರಾಯಭಾರಿಯಾಗಿದ್ದ ಮಿಥುನ್‌ ಅವರ ವಿಚಾರಣೆ ನಡೆದಿದ್ದರಿಂದ ಅವರು ಪಕ್ಷದಿಂದ ದೂರ ಸರಿದಿದ್ದರು ಎಂದು ಹೇಳಲಾಗುತ್ತಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ತಪ್ಪಿನ ವಿರುದ್ಧ ಮತ್ತೆ ಹೋರಾಡುತ್ತೇನೆ: ತನ್ನ ಅತ್ಯಾಚಾರಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿಲ್ಕಿಸ್ ಬಾನೊ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement