ಮ್ಯನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿದೆ.
ಜನರು ಬೀದಿಗಿಳಿದು ಮಿಲಿಟರಿ ಆಡಳಿತವನ್ನು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೋರಾಟ ತೀವ್ರಗೊಂಡಿರುವ ಯಾಂಗೂನ್‌ಗೆ ದೊಡ್ಡ ಸಂಖ್ಯೆಯ ಸೇನಾ ಪಡೆಗಳನ್ನು ಕಳಿಸಲಾಗುತ್ತಿದೆ. ಹಿಂದೆ ಕೂಡ ಹಲವು ಬಾರಿ ಸೇನೆ ದೇಶವಾಸಿಗಳ ಮೇಲೆ ದೌರ್ಜನ್ಯ ಎಸಗಿದೆ. ಹತ್ಯೆ, ಸಾಮೂಹಿಕ ಬಂಧನ ಹಾಗೂ ನಾಪತ್ತೆಯಂಥ ಘಟನೆಗಳು ನಡೆದಿವೆ. ಮ್ಯಾನ್ಮಾರ್‌ನ ವಿವಿಧೆಡೆ ಸೇನಾ ಆಡಳಿತದ ವಿರುದ್ಧದ ಧ್ವನಿ ತೀವ್ರಗೊಳ್ಳುತ್ತಿದೆ.
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ