ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರ ಸಂಚು: ಕಾಂಗ್ರೆಸ್‌ ಆರೋಪ

ಕೇಂದ್ರ ಸರಕಾರ ವೈಫಲ್ಯಗಳು ಹಾಗೂ ದುಷ್ಕೃತ್ಯಗಳಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ಹಾಗೂ ಅಪ್ರಸ್ತುತ ವಿಷಯಗಳಲ್ಲಿ ನಿರತರಾಗಿರುವಂತೆ ಮೋದಿ ಸರಕಾರ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, ಸರ್ಕಾರವು ಯಾವಾಗಲೂ ವಿವಾದಗಳನ್ನು ಸೃಷ್ಟಿಸುತ್ತದೆ, ಜನರನ್ನು ಕಾರ್ಯನಿರತವಾಗಿಸಲು ಕೋಪ, ದ್ವೇಷ ಹಾಗೂ ಭಯದಂಥ ಭಾವನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಜನರು ತಮ್ಮ ನೈಜ ಕಾಳಜಿಗಳನ್ನು ಮರೆತು ಇವುಗಳಲ್ಲಿ ಮಗ್ನರಾಗುತ್ತಾರೆ. ಭಾವನೆಗಳ ಜೊತೆ ಆಟವಾಡುವುದು, ವಿಭಜಿಸುವ ಭಾವನೆಗಳನ್ನು ಹುಟ್ಟುಹಾಕುವುದು, ಖಳನಾಯಕರನ್ನು ಸೃಷ್ಟಿಸುವುದು. ಉದ್ದೇಶಕ್ಕಾಗಿ ವಿಕೃತ ಇತಿಹಾಸ ಮತ್ತು ಪುರಾಣಗಳನ್ನು ಬಳಕೆ ಮಾಡುವುದು ಇವು ಅದು ಆರ್‌ಎಸ್‌ಎಸ್-ಬಿಜೆಪಿಯ ಸೈದ್ಧಾಂತಿಕ ನಿಲುವುಗಳಾಗಿವೆ.
ಕೆಲ ಮಾಧ್ಯಮಗಳು ನಮ್ಮನ್ನು ಕುರುಡಾಗಿರಿಸುತ್ತಿವೆ. ಆರ್ಥಿಕ ದುಸ್ಥಿತಿ, ನಿರುದ್ಯೋಗ, ರೈತರ ಚಳುವಳಿ, ಮಹಿಳೆಯರ ಸುರಕ್ಷತೆ ಇವುಗಳ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಆರೋಪಿಸಿದರು.
ಬಿಜೆಪಿಯ ರಾಜಕೀಯದಲ್ಲಿ ಭಾವನೆಗಳು ಪ್ರಮುಖ ಪಾತ್ರವಹಿಸುತ್ತವೆ. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ೨೦೧೯ರ ಸಂಸತ್‌ ಚುನಾವಣೆಯ ಸಂಪೂರ್ಣ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಅಸಂಖ್ಯಾತ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದರು.
ಪೆಟ್ರೋಲ್‌ಗೆ ಲೀಟರ್‌ಗೆ ೯೫ ರೂ. ನೀಡುವಾಗ ಎಲ್ಲ ಧರ್ಮದವರಿಗೂ ನೋವಾಗುತ್ತದೆ. ಮೋದಿ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಅತ್ಯಧಿಕ ತೆರಿಗೆ ವಿಧಿಸಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement