ಸ್ಟಾರ್ಟಪ್‌ಗಳನ್ನು ವಿಶ್ವ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯನ್ನಾಗಿ ರೂಪಿಸಿ: ಪ್ರಧಾನಿ ಮೋದಿ

ಸ್ಟಾರ್ಟಪ್‌ಗಳ ಸಂಸ್ಥಾಪಕರು ಕೇವಲ ಮೌಲ್ಯಮಾಪನದ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶ್ವ ಗುಣಮಟ್ಟದ ಸೇವೆ ಒದಗಿಸುವ ಸಂಸ್ಥೆಗಳನ್ನು ಕಟ್ಟುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ನಾಸ್ಕಾಂ ಟೆಕ್ನಾಲಜಿ ಮತ್ತು ಲೀಡರ್‌ಶಿಪ್‌ ಫೋರಂನಲ್ಲಿ ಮಾತನಾಡಿ, ಸ್ಟಾರ್ಟ್ಅಪ್‌ಗಳು ತಮ್ಮನ್ನು ನಿರ್ಗಮನ ತಂತ್ರಗಳ ಮೌಲ್ಯಮಾಪನಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಶ್ರೇಷ್ಠತೆಯ ಜಾಗತಿಕ ಮಾನದಂಡವನ್ನು ನಿಗದಿಪಡಿಸುವ ವಿಶ್ವ ದರ್ಜೆಯ ಉತ್ಪನ್ನಗಳನ್ನು ರೂಪಿಸುವ ಮೂಲಕ ಪ್ರಸ್ತುತ ಶತಮಾನದುದ್ದಕ್ಕೂ ಇರಬಲ್ಲ ಸಂಸ್ಥೆಯನ್ನು ನಿರ್ಮಿಸುವ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.
ದೇಶದ ಅಗಾಧ ಜನಸಂಖ್ಯೆ ಐಟಿ ಉದ್ಯಮದ ದೊಡ್ಡ ಶಕ್ತಿಯಾಗಿದ್ದು, ಹೊಸ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಜನರು ಉತ್ಸುಕರಾಗಿದ್ದಾರೆ ಎಂದರು. ಗ್ರಾಮೀಣ ಮಕ್ಕಳಲ್ಲಿ ಪಾರ್ಶ್ವ ಚಿಂತನೆಯನ್ನು ಬೆಳೆಸುವ ಐಟಿ ಉದ್ಯಮದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಪ್ರಯತ್ನದಿಂದ ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತಿದೆ. ದೇಶದಲ್ಲಿ ಆಲೋಚನೆಗಳ ಕೊರತೆಯಿಲ್ಲ, ವಿಚಾರಗಳನ್ನು ವಾಸ್ತವಕ್ಕೆ ರೂಪಾಂತರಿಸಲು ಸಹಾಯ ಮಾಡುವ ಮಾರ್ಗದರ್ಶಕರ ಅಗತ್ಯವಿದೆ ಎಂದು ಅವರು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement