ಹೋರಾಟ ತೀವ್ರಕ್ಕೆ ದೆಹಲಿ ಗಡಿ ಬಳಿ ಜಮಾಯಿಸಲು ರೈತರಿಗೆ ಮನವಿ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ರಾಜ್ಯಾದ್ಯಂತ ಆಯೋಜಿಸಲಾಗಿರುವ ಮಹಾಪಂಚಾಯತ್‌ಗಳನ್ನು ರದ್ದುಗೊಳಿಸಿ ರಾಷ್ಟ್ರವ್ಯಾಪಿ ನಡೆಯುವ ರೈಲು ರೋಕೊ ಯಶಸ್ವಿಗೊಳಿಸಲು ದೆಹಲಿ ಗಡಿಗೆ ತೆರಳುವಂತೆ ೩೨ ಪಂಜಾಬ್‌ ರೈತ ಸಂಘಟನೆಗಳ ವೇದಿಕೆ ರಾಜ್ಯದ ರೈತರಿಗೆ ಕೋರಿದೆ.
ಮೂರು ಕೃಷಿ ಕಾನೂನುಗಳ ಅಪಾಯಗಳ ಬಗ್ಗೆ ರೈತರಿಗೆ ಮನವರಿಕೆಯಾಗಿರುವುದರಿಂದ ಮಹಾಪಂಚಾಯತ್‌ಗಳನ್ನು ರದ್ದುಪಡಿಸಲಾಗಿದೆ. ಜನವರಿ ೨೬ರ ನಂತರ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾಕಾರರ ಸಂಖ್ಯೆ ಕ್ಷೀಣಿಸುತ್ತಿದ್ದು, ಸಂಖ್ಯೆ ಹೆಚ್ಚಿಸುವ ದಿಸೆಯಲ್ಲಿ ಮಹಾಪಂಚಾಯತ್‌ ರದ್ದು ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ರೈಲು ರೋಕೊ ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ. ದೆಹಲಿಯ ಗಡಿಯಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಕೀರ್ತಿ ಕಿಸಾನ್ ಒಕ್ಕೂಟದ ರಾಜಿಂದರ್ ಸಿಂಗ್ ದೀಪ್ ಸಿಂಗ್ ವಾಲಾ, ಚಳವಳಿಗೆ ತಡವಾಗಿ ಸೇರಿಕೊಂಡ ರಾಜ್ಯಗಳಿಗೆ ಮಹಾಪಂಚಾಯತ್‌ಗಳು ಹೆಚ್ಚು ಅಗತ್ಯವಿದೆ. “ನಾವು ಕಳೆದ ವರ್ಷವೇ ಹೋರಾಟ ಆರಂಭಿಸಿದ್ದೇವೆ ಎಂದು ಹೇಳಿದರು. ಆದರೆ ಪಂಜಾಬ್‌ನ ಅತಿದೊಡ್ಡ ರೈತ ಸಂಘವಾದ ಭಾರತೀಯ ಕಿಸಾನ್ ಯೂನಿಯನ್-ಏಕ್ತಾ (ಉಗ್ರಾಹಾನ್) ಫೆಬ್ರವರಿ 21 ರಂದು ಬರ್ನಾಲಾದಲ್ಲಿ ನಡೆಯಲು ಯೋಜಿಸಿರುವ ತನ್ನ ಕಿಸಾನ್-ಮಜ್ದೂರ್ ಏಕ್ತಾ ರ್ಯಾಲಿಯನ್ನು ರದ್ದುಗೊಳಿಸಿಲ್ಲ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು 19 ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ