ಪ್ರಿಯಾ ರಮಣಿಗೆ ಗೆಲುವು ಇತರ ಪೀಡಿತ ಮಹಿಳೆಯರಿಗೆ ಪ್ರೇರಣೆ

ಪ್ರಿಯಾ ರಮಣಿ ಶಕ್ತಿಯುತ ವ್ಯಕ್ತಿಯ ವಿರುದ್ಧ ಹೋರಾಟದಲ್ಲಿ ಗೆದ್ದಿದ್ದಾಳೆ.
ಖ್ಯಾತ ಪತ್ರಕರ್ತ ಎಂ.ಜೆ.ಅಕ್ಬರ್‌ ಅವರು ಈಕೆಯ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಮರಣದಲ್ಲಿ ಆಕೆಗೆ ಕ್ಷಮೆಯಾಚಿಸಲು ಅವಕಾಶ ನೀಡಲಾಯಿತು. ಅವಳು ಹಿಂತೆಗೆದುಕೊಂಡಿದ್ದರೆ ಕೆಲವರು ಅವಳನ್ನು ದೂಷಿಸುತ್ತಿದ್ದರು. ಆದರೆ ಪ್ರಿಯಾ, ತನ್ನ ಕುಟುಂಬದ ಬೆಂಬಲದೊಂದಿಗೆ, ಹಿತೈಷಿಗಳು, ಸಹೋದ್ಯೋಗಿಗಳು ಮತ್ತು ತನ್ನ ಕಾರಣವನ್ನು ಬಲಪಡಿಸಲು ಮಾತನಾಡಿದ ಇತರ ಮಹಿಳೆಯರ ಬೆಂಬಲದೊಂದಿಗೆ, ಅವಳು ತನ್ನ ನಿಲುವಿಗೆ ಅಂಟಿಕೊಂಡಳು ಹಾಗೂ ಗೆದ್ದಳು.
ಅವಳ ಧೈರ್ಯದಿಂದಾಗಿ, ಅವಳ ನಂತರ ಬರುವ ಇನ್ನೂ ಅನೇಕ ಮಹಿಳೆಯರಿಗೆ ಇದು ಪ್ರೇರಣೆಯಾಗಲಿದೆ. ಅವರು ತಮ್ಮ ಹಕ್ಕನ್ನು ಪಡೆಯಲು ಪ್ರಯತ್ನಿಸುತ್ತಾರೆ. ಕೇಂದ್ರದ ಮಾಜಿ ಸಚಿವ ಮತ್ತು ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್ ಅವರು ಪ್ರಿಯಾ ರಮಣಿ ವಿರುದ್ಧ ಹೂಡಿದ್ದ ಮಾನಹಾನಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಪ್ರಿಯಾ ರಮಣಿ ಅವರನ್ನು ಬುಧವಾರ ಖುಲಾಸೆಗೊಳಿಸಿದೆ. ಅಕ್ಟೋಬರ್ 2018 ರಲ್ಲಿ, ಪ್ರಿಯಾ ಅವರು 2017ರ ವೋಗ್ ಲೇಖನದಲ್ಲಿ ತನ್ನ ಬಾಸ್‌ನಿಂದ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ನಿಜವಾಗಿ ಆ ಸಮಯದಲ್ಲಿ ಭಾರತದಲ್ಲಿ ಭುಗಿಲೆದ್ದ ಮೀ ಟೂ ಚಳವಳಿಯ ಸಮಯದಲ್ಲಿ ಪ್ರಿಯಾ ಅವರು ಎಂ.ಜೆ. ಅಕ್ಬರ್‌ ವಿರುದ್ಧ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದ ತರುವಾಯ 20 ಕ್ಕೂ ಹೆಚ್ಚು ಮಹಿಳೆಯರು ಎಂಜೆ ಅಕ್ಬರ್ ಅವರಿಂದ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಕುರಿತು ಆರೋಪಿಸಿದರು, ಅನೇಕರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಅಕ್ಟೋಬರ್ 17 ರಂದು ಅಕ್ಬರ್ ಅವರು ವಿದೇಶಾಂಗ ಸಚಿವರ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಪ್ರಿಯಾ ರಮಣಿ ವಿರುದ್ಧ “ಕಳಂಕಿತ” ಖ್ಯಾತಿ ಇದೆ ಎಂದು ಆರೋಪಿಸಿ ಎಂ.ಜೆ. ಅಕ್ಬರ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು.
. ಎಮ್‌. ಜೆ.ಅಕ್ಬರ್ ಸಲ್ಲಿಸಿದಂ ತಹ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ, ಒಬ್ಬ ವ್ಯಕ್ತಿಗೆ ದಂಡ ಅಥವಾ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ಆದರೆ ಎಂಜೆ ಅಕ್ಬರ್ ವಾದವನ್ನು” ದೆಹಲಿ ನ್ಯಾಯಾಲಯವು ಒಪ್ಪಿಕೊಂಡಿಲ್ಲ

ಪ್ರಮುಖ ಸುದ್ದಿ :-   ಕೊಲೆ ಯತ್ನ: ಆಂಧ್ರ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ಇಬ್ಬರು ಐಪಿಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement