ಬಸ್‌ ಪ್ರಯಾಣ ದರ ಹೆಚ್ಚಳವಿಲ್ಲ: ಸಾರಿಗೆ ಸಚಿವ ಸವದಿ

ಡೀಸೆಲ್‌ ಬೆಲೆ ಹೆಚ್ಚಳಗೊಂಡಿದ್ದರೂ ಬಸ್‌ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬಸ್‌ ಪ್ರಯಾಣ ದರ ಹೆಚ್ಚಿಸುವಂತೆ ಈಗಾಗಲೇ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾಪ ಬಂದಿದೆ. ಆದರೆ ಕೊರೊನಾ, ನೈಸರ್ಗಿಕ ವಿಕೋಪದ ಕಾರಣದಿಂದಾಗಿ ಈಗಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಿದರೆ ಜನರಿಗೆ ಇನ್ನಷ್ಟು ತೊಂದರೆ ಕೊಟ್ಟಂತೆ ಆಗುತ್ತದೆ ಎಂದರು.
ಸದ್ಯ ಶೇ.90ರಷ್ಟು ಬಸ್‌ಗಳು ಸಂಚರಿಸುತ್ತಿದ್ದು, ಎಪ್ರಿಲ್‌ ತಿಂಗಳ ಅಂತ್ಯಕ್ಕೆ ಸಹಜ ಸ್ಥಿತಿ ಬರುವ ಸಾಧ್ಯತೆಯಿದೆ. ಈ ಬಾರಿಯ ಬಜೆಟ್‌ನಲ್ಲಿ ಈಶಾನ್ಯ, ವಾಯವ್ಯ ಹಾಗೂ ಕೆಎಸ್‌ಆರ್‌ಟಿಸಿಗೆ ತಲಾ 1000 ಬಸ್‌ಗಳನ್ನು ನೀಡಲಾಗುವುದು. ಹಳೆಯ ಬಸ್‌ಗಳನ್ನು ಗುಜರಿಗೆ ಹಾಕದೇ ಅವುಗಳನ್ನು ಶೌಚಾಲಯ, ಡೇ ಕೇರ್‌ ಸೆಂಟರ್‌, ಹಾಲುಣಿಸುವ ಮಹಿಳಾ ಕೇಂದ್ರಗಳನ್ನಾಗಿ ರೂಪಿಸುವ ಉದ್ದೇಶವಿದೆ ಎಂದು ಸಚಿವ ಸವದಿ ತಿಳಿಸಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement