ಅಭಿಷೇಕ್‌ ಬ್ಯಾನರ್ಜಿ ಮಾನಹಾನಿ ಪ್ರಕರಣ: ಅಮಿತ್‌ ಶಾಗೆ ಸಮನ್ಸ್‌

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಹಾಕಿದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾಗೆ ಪಶ್ಚಿಮ ಬಂಗಾಳ ಸಂಸದರು ಹಾಗೂ ಶಾಸಕರ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದೆ.
ಅಮಿತ್‌ ಶಾ ವೈಯಕ್ತಿಕವಾಗಿ ಇಲ್ಲವೇ ಪ್ರತಿನಿಧಿ ಫೆ.೨೨ರಂದು ಬೆಳಗ್ಗೆ ೧೦ ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದೆ. ೨೦೧೮ರ ಆಗಸ್ಟ್‌ ೨೮ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ೫೦೦ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
2018 ಆಗಸ್ಟ್ 11ರಂದು, ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ಬಿಜೆಪಿ ಆಯೋಜಿಸಿದ್ದ ಯುವ ಸ್ವಾಭಿಮಾನ್ ಸಮಾವೇಶ ರ್ಯಾಲಿಯಲ್ಲಿ ಮಾತನಾಡಿದ ಶಾ, ತೃಣಮೂಲ ಕಾಂಗ್ರೆಸ್ ಭ್ರಷ್ಟಾಚಾರದಿಂದಾಗಿ ಕೇಂದ್ರ ನಿಧಿಯಡಿ ವಿತರಿಸಿದ ಹಣವನ್ನು ಬಂಗಾಳದ ಜನರಿಗೆ ತಲುಪಿಲ್ಲ. ಮೋದಿಜಿ ಕಳಿಸಿದ ಹಣ ಸೋದರಳಿಯ ಹಾಗೂ ಸಿಂಡಿಕೇಟ್‌ಗಳಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದರು.
ಆಗಸ್ಟ್ 13 ರಂದು, ಮುಖ್ಯಮಂತ್ರಿಯ ಸೋದರಳಿಯ ಆಗಿರುವ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಶಾ ವಿರುದ್ಧ ಕಾನೂನು ನೋಟಿಸ್ ಕಳುಹಿಸಿದರು, ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ನಂತರ ಅಭಿಶೇಕ್‌, ಅಮಿತ್‌ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement