ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ.
ಗೃಹ ನಿರ್ಮಾಣಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದ್ರ ಜೊತೆಗೆ ಸಾಲದ ಮೇಲಿನ ಸಂಸ್ಕರಣಾ ಶುಲ್ಕ ಕೂಡ ಮನ್ನಾ ಮಾಡುತ್ತಿದೆ.
ಎಸ್‌ಬಿಐ ಗೃಹ ನಿರ್ಮಾಣದ ಸಾಲದ ಮೇಲಿನ ಸಂಸ್ಕರಣಾ ಶುಲ್ಕವನ್ನ ಮನ್ನಾ ಮಾಡುವುದಾಗಿ ಪ್ರಕಟಿಸಿದೆ. ಇದು ಸಾಲಗಾರರಿಗೆ ಸ್ವಲ್ಪ ನಿರಅಳ ನೀಡಿದಂತಾಗಿದೆ. ಆದರೆ ಗೃಹ ಸಾಲವನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಮಾತ್ರ ಸಾಲದ ಮೇಲಿನ ಸಂಸ್ಕರಣಾ ಶುಲ್ಕ ಮನ್ನಾ ಲಭ್ಯವಿರುತ್ತದೆ ಎಂದು ಎಸ್‌ಬಿಐ ತಿಳಿಸಿದೆ.
ಆದಾಗ್ಯೂ, ಗೃಹ ಸಾಲ ತೆಗೆದುಕೊಳ್ಳುವವರು ಮಾರ್ಚ್ 31ರವರೆಗೆ ಯಾವುದೇ ಸಂಸ್ಕರಣಾ ಶುಲ್ಕವನ್ನ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಗ್ಗದ ಬಡ್ಡಿದರದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಬಹುದು ಎಂದು ಹೇಳಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇಕಡಾ 6.8 ರಿಂದ ಪ್ರಾರಂಭವಾಗಲಿದೆ. ಗೃಹ ಸಾಲ ಮಾರುಕಟ್ಟೆಯಲ್ಲಿ ಎಸ್‌ಬಿಐ ಶೇ. 34 ರಷ್ಟು ಪಾಲನ್ನ ಹೊಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ