ಮಾ.೨೦ರಿಂದ ರಾಜ್ಯದಲ್ಲಿ ರೈತರ ಸಮಾವೇಶ

ದೆಹಲಿಯಲ್ಲಿ ರೈತ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾರ್ಚ್‌ ೨೦ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತ ಸಮಾವೇಶ ಆಯೋಜಿಸಲಾಗುವುದು ಎಂದು ರೈತ ಸಂಘದ ವರಿಷ್ಠೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ.
ಮಾ.೨೦ರಂದು ಶಿವಮೊಗ್ಗ, ಮಾ.೨೧ರಂದು ಹಾವೇರಿ, ಮಾ.೨೨ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ ಯೂನಿಯನ್‌ ಮುಖಂಡ ರಾಕೇಶ ಟಿಕಾಯತ್‌, ಯುದ್ಧವೀರ ಸಿಂಗ್‌ ಭಾಗವಹಿಸಲಿದ್ದಾರೆ. ಎಲ್ಲ ರೈತರನ್ನು ಒಗ್ಗೂಡಿಸಲು ಇದು ಸುಸಂದರ್ಭ. ಎಲ್ಲ ಅಡತಡೆಗಳನ್ನು ಮೀರಿ ರೈತರು ಒಂದಾಗಿ ಹೋರಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದ ರೈತರನ್ನು ಒಗ್ಗೂಡಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಾಯುಕ್ತ ದಾಳಿ ವೇಳೆ 45.14 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ...!

ನಿಮ್ಮ ಕಾಮೆಂಟ್ ಬರೆಯಿರಿ

advertisement