ಯುವಕರು “ದೇಶ ಮೊದಲುʼ ಎಂಬ ಮನೋಭಾವ ಅಳವಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಪಂಚಿನಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕ ವಿದ್ಯಾವಂತರಿದ್ದಾರೆ, ಇನ್ನೊಂದೆಡೆ ಕೊರೊನಾದಂಥ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಜನರೂ ಇದ್ದಾರೆ. ಎಲ್ಲವೂ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಮನಸ್ಥಿತಿಗೂ ಅವಕಾಶವಿದೆ. ಎರಡೂ ಮನಸ್ಥಿತಿಯ ಜನರ ದಾರಿ ಮುಕ್ತವಾಗಿದೆ.
ಬಿಕ್ಕಟ್ಟಿನ ಭಾಗವಾಗದೆ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು “ರಾಷ್ಟ್ರ ಪ್ರಥಮ” ಎಂಬ ಮನೋಭಾವ ಬೆಳೆಸಿಕೊಳ್ಳಬೇಕು.
ನಾವು ನಮ್ಮ ಹಿತಾಸಕ್ತಿಯನ್ನು ನೋಡುವುದನ್ನು ಮುಂದುವರಿಸಿದರೆ ನಾವು ಯಾವಾಗಲೂ ನಮ್ಮ ಸುತ್ತಲಿನ ಸಮಸ್ಯೆಗಳು, ಬಿಕ್ಕಟ್ಟುಗಳಿಗೆ ಸಾಕ್ಷಿಯಾಗುತ್ತೇವೆ. ಆದರೆ ಸ್ವಂತ ಹಿತಾಸಕ್ತಿ ಮೀರಿ ದೇಶ ಮೊದಲು ಎಂಬ ಮನೋಭಾವ ಬೆಳೆಸಿಕೋಂಡರೆ ಪ್ರತಿ ಸಮಸ್ಯೆ ಮತ್ತು ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆತ್ಮನಿರ್ಭಾರ ಭಾರತ್‌ನ ಪ್ರಮುಖ ಹೆಜ್ಜೆಯಾಗಿದೆ. ಇದು ಸಂಶೋಧನೆ ಮತ್ತು ನಾವೀನ್ಯತೆಗೆ ಶಕ್ತಿಯನ್ನು ನೀಡುತ್ತದೆ. ಇದು ಮಹಿಳೆಯರ ಶಿಕ್ಷಣಕ್ಕೂ ಒತ್ತಡವನ್ನು ನೀಡುತ್ತದೆ ಎಂದು ಮೋದಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ