೨೫ ವರ್ಷಗಳ ನಂತರ ಮಹಿಳೆ ದೇಹದಿಂದ ಹೊರಬಂತು ಸೀಟಿ..!

ಕಣ್ಣೂರು (ಕೇರಳ): ಸುಮಾರು ೨೫ ವರ್ಷಗಳ ಹಿಂದೆ ೧೫ ವರ್ಷಗಳ ಬಾಲಕಿಯೊಬ್ಬಳು ಆಟವಾಡುತ್ತಾ ಸೀಟಿ ನುಂಗಿಬಿಟ್ಟಿದ್ದಳು.ಈಗ ೨೫ ವರ್ಷಗಳ ನಂತರ ಸೀಟಿ ಆಕೆಯ ದೇಹದಿಂದ ಹೊರಬಿದ್ದಿದೆ.ವೈದ್ಯರು ಅದನು ಆಕೆಯ ದೇಹದಿಂದ ಹೊರ ತೆಗೆದಿದ್ದಾರೆ.
ಘಟನೆ ವಿವರ: ಗೆಳೆಯನೊಂದಿಗೆ ಆಟವಾಡುತ್ತಿದ್ದ ವೇಳೆ, ಈಕೆ ಆಕಸ್ಮಾತ ಸೀಟಿಯನ್ನು ನುಂಗಿದ್ದಳು. ಅದು ಬಾಲಕಿಯ ಶ್ವಾಸಕೋಶದಲ್ಲಿ ಸಿಲುಕಿಬಿಟ್ಟಿತ್ತು.
ಆ ಕ್ಷಣದಲ್ಲಿ ಆಕೆಗೆ ಏನು ಆಗಲಿಲ್ಲ. ಆದರೆ ನಂತರದ ವರ್ಷಗಳಲ್ಲಿ ಆಕೆ ನಿರಂತರ ಕೆಮ್ಮಿನಿಂದ ಬಳಲು ಶುರು ಮಾಡಿದ್ದಳು. ಸೀಟಿಯ ವಿಷಯ ಮನೆಯವರ ಗಮನಕ್ಕೂ ಬಂದಿರದ ಕಾರಣ, ಕೆಮ್ಮಿಗೆ ಔಷಧ ಕೊಡಿಸುತ್ತಿದ್ದರು. ಔಷಧ ತೆಗೆದುಕೊಂಡ ತಕ್ಷಣ ಕೆಮ್ಮು ಗುಣಮುಖರಾದರೂ ಮತ್ತೆ ಕೆಮ್ಮಿನ ಬಾಧೆ ಶುರುವಾಯಿತು.
ಆಸ್ತಮಾದಿಂದ ಉಸಿರಾಟದ ಸಮಸ್ಯೆ ಇದೆ ಎಂದು ಭಾವಿಸಿ ವೈದ್ಯರು ಚಿಕಿತ್ಸೆ ಕೊಡುತ್ತಿದ್ದರು.ಸಮಸ್ಯೆ ಬಗೆಹರಿದಿರಲಿಲ್ಲ.
ಹೀಗೆ 25 ವರ್ಷ ಕಳೆದಿತ್ತು. ಕೆಲ ವರ್ಷಗಳಿಂದ ನಿರಂತರವಾಗಿ ಕೆಮ್ಮಿನ ಬಳಲಿದ ಮಹಿಳೆ. ಈ ಸಮಸ್ಯೆ ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಸ್ಕ್ಯಾನಿಂಗ್​, ಎಕ್ಸ್​ರೇ ಮಾಡಿದ ನಂತರ ಅವರಿಗೇ ಶಾಕ್​ ಆಗಿದೆ. ಆಗ ಅವರಿಗೆ ಈ ಮಹಿಳೆಯ ಶ್ವಾಸಕೋಶದಲ್ಲಿ ಸೀಟಿ ಸೇರಿಕೊಂಡಿರುವುದು ಎಕ್ಸ್​ರೇ ಮೂಲಕ ಕಂಡುಬಂದಿದೆ. ಸೀಟಿ ಇಷ್ಟು ವರ್ಷಗಳಿಂದ ದೇಹದೊಳಕ್ಕೆ ಇರುವುದನ್ನು ನೋಡಿ ಅವರಿಗೇ ಅಚ್ಚರಿಯಾಯಿತು.
ವೈದ್ಯರಾದ ರಾಜೀವ್ ರಾಮ್ ಹಾಗೂ ಪದ್ಮನಾಭನ್ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿನ ತಂಡವು ಆಕೆಯ ಬ್ರಾಂಕಸ್ ಪಥದಲ್ಲಿ ಸಿಲುಕಿದ್ದ ಸೀಟಿ ಹೊರತೆಗೆದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement