ಕೇರಳದಿಂದ ಬೆಂಗಳೂರಿಗೆ ಬರುವವರಿಗೆ ಕೊರೊನಾ ವರದಿ ತರುವುದು ಕಡ್ಡಾಯ

ಬೆಂಗಳೂರು: ಕೇರಳದಿಂದ ಬೆಂಗಳೂರಿಗೆ ಬರುವವರು ಕೊರೊನಾ ನೆಗೆಟಿವ್‌ ವರದಿ ತರುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ ತಿಳಿಸಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಿಂದ ಬಂದವರಿಗೆ ಕೊವಿಡ್‌-೧೯ ಪರೀಕ್ಷೆ ಆಗಿದೆಯೇ ಎಂಬುದನ್ನು ಉದ್ಯೋಗದಾತ ಕಂಪನಿಗಳು, ವಾಸವಿರುವ ಅಪಾರ್ಟಮೆಂಟ್‌ ಮಾಲಿಕರ ಜವಾಬ್ದಾರಿ. ಕೊರೊನಾ ಪರೀಕ್ಷೆ ಮಾಡಿಸದೇ ಬರುವವರಿಗೆ ಕೆಲಸ ಮಾಡಲು ಅಥವಾ ಉಳಿದುಕೊಳ್ಳಲು ಅವಕಾಶ ನೀಡಿದರೆ ಸಂಸ್ಥೆಯ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದರು.
ಒಂದು ವೇಳೆ ಪರೀಕ್ಷೆಗೊಳಗಾಗದೇ ನಗರಕ್ಕೆ ಬಂದರೆ ಅಂಥವರನ್ನು ಕ್ವಾರಂಟೈನ್‌ನಲ್ಲಿಟ್ಟು ಪರೀಕ್ಷೆ ನಡೆಸಲಾಗುವುದು. ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟ ನಂತರ ಕಳಿಸಲಾಗುವುದು. ಮಹಾರಾಷ್ಟ್ರದಿಂದ ಸೋಂಕು ಹರಡದಂತೆ ತಡೆಯಲು ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement