ಪಂಜಾಬ್‌ನಲ್ಲಿ ರೈತರ ಪ್ರದರ್ಶನಕ್ಕೆ ಕರೆ ನೀಡಿದ ದರೋಡೆಕೋರ ಲಖ್ಬೀರ್‌ ಸಿಂಗ್‌

ಗಣರಾಜ್ಯೋತ್ಸದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ಬೇಕಾದ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ದರೋಡೆಕೋಡ ಲಖ್ಬೀರ್‌ ಸಿಂಗ್‌ (ಲಖಾ ಸಿದ್ಧನಾ) ಫೆ.೨೩ರಂದು ಭಟಿಂಡಾ ಜಿಲ್ಲೆ ಮೆಹರಾಜ್‌ದಲ್ಲಿ ಕೃಷಿ ಆಂದೋಲನ ಬೆಂಬಲಿಸಿ ಪ್ರದರ್ಶನ ನಡೆಸುವುದಾಗಿ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಸ್ವಗ್ರಾಮ ಮೆಹರಾಜ್‌ನಲ್ಲಿ ರೈತರ ಪ್ರದರ್ಶನ ನಡೆಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮೆಹರಾಜ್‌ನ ಧಾನ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರಬೇಕೆಂದು ಕರೆನೀಡಿದ್ದಾರೆ ಅಲ್ಲದೇ  ತಾನು ಸಹ ಈ ಪ್ರದರ್ಶನದಲ್ಲಿ   ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.
ಫೆ. ೧೪ರಂದು ಲಖ್ಬೀರ್‌ ಸಿಂಗ್‌ನ ಮಾಹಿತಿ ನೀಡಿದವರಿಗೆ ದೆಹಲಿ ಪೊಲೀಸರು ರೂ. ೧ ಲಕ್ಷ ಬಹುಮಾನ ಘೋಷಿಸಿದ್ದರು. ದೆಹಲಿ ಪೊಲೀಸರ ವಿವಿಧ ತಂಡಗಳು ಪಂಜಾಬ್, ಹರಿಯಾಣ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ದರೋಡೆಕೋರನಿಗಾಗಿ ಶೋಧ ನಡೆಸಿವೆ.
ಲಖ್ಬೀರ್‌ ವಿರುದ್ಧ ಕೊಲೆ, ಕೊಲೆ ಯತ್ನ, ಲೂಟಿ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಾಗಿವೆ. 2004 ಮತ್ತು 2017 ರ ನಡುವೆ ಹಲವಾರು ಬಾರಿ ಈತನನ್ನು ಜೈಲಿಗೆ ಹಾಕಲಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/
ಓದಿರಿ :-   ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಆಗಿ, ದೇವೇಂದ್ರ ಫಡ್ನವಿಸ್ ಡೆಪ್ಯುಟಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ