ಶ್ರೀನಗರ: ಇಬ್ಬರು ಉಗ್ರರ ಸಹಚರರ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಉಗ್ರರ ಇಬ್ಬರು ಸಹಚರರನ್ನು ಬಂಧಿಸಿವೆ.
ಬಂಧಿತರಿಂದ ಅಪರಾಧ ಕೃತ್ಯಕ್ಕೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಬೀದ್‌ ವಾಝಾ ಹಾಗೂ ಬಷೀರ್‌ ಅಹ್ಮದ್‌ ಗೋಜೇರ್‌ ಎಂದು ಗುರುತಿಸಲಾಗಿದೆ. ಅವರಿಬ್ಬರೂ ಉಗ್ರರಿಗೆ ಕಾರ್ಯಾಚರಣೆಗೆ ಬೇಕಾಗುವ ಸಾಮಗ್ರಿಗಳನ್ನು ಪೂರೈಸುತ್ತಿದ್ದರು. ಪೊಲೀಸರ ಮೇಲೆ ಗ್ರೆನೆಡ್‌ ದಾಳಿ ನಡೆಸುವಂತೆ ಇಬ್ಬರಿಗೂ ಉಗ್ರರು ಸೂಚಿಸಿದ್ದರು ಎಂಬ ವಿಷಯ ವಿಚಾರಣೆಯಿಂದ ಗೊತ್ತಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕಪಿಲ್ ಶರ್ಮಾ, ರಾಜಪಾಲ ಯಾದವ್ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement