ಅಪರಿಚಿತ ಬಂದೂಕುಧಾರಿಗಳಿಂದ ಪಾಕಿಸ್ತಾನದಲ್ಲಿ 30ಕ್ಕೂ ಹೆಚ್ಚು ಲಷ್ಕರ್ ಉಗ್ರರ ಹತ್ಯೆ’ ; ಕ್ಯಾಮೆರಾ ಮುಂದೆಯೇ ಉಗ್ರನ ಒಪ್ಪಿಗೆ

ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ʼಲಷ್ಕರ್-ಎ-ತೈಬಾ (LeT)ʼದ ಹಿರಿಯ ಕಾರ್ಯಕರ್ತನೊಬ್ಬ ಕ್ಯಾಮೆರಾ ಮುಂದೆ ನೀಡಿರುವ ಹೇಳಿಕೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಲಷ್ಕರ್-ಎ-ತೈಬಾದ ಸುಮಾರು 30ಕ್ಕೂ ಹೆಚ್ಚು ಸದಸ್ಯರನ್ನು ಪಾಕಿಸ್ತಾನದೊಳಗೆ ಗುರುತು ತಿಳಿಯದ ಅಪರಿಚಿತ ದಾಳಿಕೋರರು ಹತ್ಯೆಗೈದಿದ್ದಾರೆ  ಎಂದು ಆತ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ರಿಜ್ವಾನ್ ಹನೀಫ್, ಭಾರತಕ್ಕೆ … Continued

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್‌ ಖಾನ್‌ ರನ್ನು ಭಯೋತ್ಪಾದಕ ಎಂದು ಕರೆದ ಪಾಕಿಸ್ತಾನ…! ಕಾರಣ..?

ರಿಯಾದ್: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ಬಲೂಚಿಸ್ತಾನದ ಬಗ್ಗೆ ನೀಡಿದ ಹೇಳಿಕೆ ಪಾಕಿಸ್ತಾನದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ವರದಿಗಳ ಪ್ರಕಾರ, ಪಾಕಿಸ್ತಾನ ಸರ್ಕಾರವು ನಟನಿಗೆ ಭಯೋತ್ಪಾದಕ ಎಂಬರ್ಥದಲ್ಲಿ ಹಣೆಪಟ್ಟಿ ಕಟ್ಟಲಾಗಿದೆ. ಪಾಕಿಸ್ತಾನವು ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ (1997) 4 ನೇ ಶೆಡ್ಯೂಲ್‌ ಅಡಿಯಲ್ಲಿ ಇರಿಸಿದೆ ಎಂದು ಆರೋಪಿಸಲಾಗಿದೆ. ಈ ಶೆಡ್ಯೂಲ್‌ … Continued

30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಪ್ರಮುಖ ಆರೋಪಿ ಅರೆಸ್ಟ್‌

ಚೆನ್ನೈ : ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿಯನ್ನು 30 ವರ್ಷಗಳ ಬಳಿಕ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ ಎಂದು ಹೇಳಲಾಗಿದೆ. ಈತ 1995ರಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. … Continued

ಸೇನೆ ಬರ್ಲಿ ನೋಡ್ಕೊಳ್ತೇನೆ..; ಎನ್‌ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್‌…

ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಅಮೀರ್ ನಜೀರ್ ವಾನಿ ಮತ್ತು ಆತನ ತಾಯಿಯ ನಡುವಿನ ಮಾತುಕತೆಯನ್ನು ತೋರಿಸುವ ವೀಡಿಯೊ ಕ್ಲಿಪ್ ಹೊರಬಿದ್ದಿದೆ. ಮಾತುಕತೆಯ ಸಮಯದಲ್ಲಿ ತಾಯಿ ತನ್ನ ಮಗನಿಗೆ ಭದ್ರತಾ ಪಡೆಗಳಿಗೆ ಶರಣಾಗುವಂತೆ ಬೇಡಿಕೊಂಡಿದ್ದಾಳೆ. ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವಾನಿ ಹತನಾಗುವ ಸ್ವಲ್ಪ ಸಮಯದ ಮೊದಲು ವೀಡಿಯೊ ಕರೆ ಮೂಲಕ … Continued

ಭಯೋತ್ಪಾದಕ ಹಾಶಿಮ್ ಮೂಸಾನ ಜೀವಂತವಾಗಿಯೇ ಹಿಡಿಯುವುದು ಭಾರತಕ್ಕೆ ಅತಿ ಮಹತ್ವದ್ದು ; ಯಾಕಂದ್ರೆ ಇದ್ರಿಂದ ಪಾಕಿಸ್ತಾನ….

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾಕರಿಂದ ನಡೆದ ಪ್ರವಾಸಿಗರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಗುರುತಿಸಿದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಲ್ಲಿ ಒಬ್ಬನಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್‌ನನ್ನು ಪಾಕಿಸ್ತಾನ ಸೇನೆಯು ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ‘ಎರವಲು’ ನೀಡಿದೆಯೇ? ಮೂಸಾ ಪಾಕಿಸ್ತಾನದ ಪ್ಯಾರಾ ವಿಶೇಷ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾನೆ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ … Continued

“ನನ್ನ ಗಂಡನ ಮೇಲೆ ಗುಂಡು ಹಾರಿಸಿದ ನಂತರ ಭಯೋತ್ಪಾದಕ ನಗುತ್ತಿದ್ದ…”: ಪಹಲ್ಗಾಮ್ ದಾಳಿಯಲ್ಲಿ ಮೃತ ಶೈಲೇಶ ಪತ್ನಿ

ಅಹಮದಾಬಾದ್ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೂರತ್ ನಿವಾಸಿ ಶೈಲೇಶ್ ಕಲಾಥಿಯಾ ಅವರ ಪತ್ನಿ ಗುರುವಾರ, ತಮ್ಮ ಪತಿಯನ್ನು ಗುಂಡಿಕ್ಕಿ ಕೊಂದ ನಂತರ ಭಯೋತ್ಪಾದಕರು ನಗುತ್ತಿದ್ದರು, ಅವರಲ್ಲಿ ಯಾವುದೇ ಪಶ್ಚಾತ್ತಾಪದ ಲವಲೇಶದ ಭಾವವೂ ಇರಲಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ … Continued

ಭಾರತದ ಮೋಸ್ಟ್‌ ವಾಂಟೆಡ್ ಭಯೋತ್ಪಾದಕ ಪಾಕಿಸ್ತಾನದಲ್ಲಿ ಹತ್ಯೆ

ನವದೆಹಲಿ: ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಪ್ರಮುಖ ಸಹಾಯಕ ಮತ್ತು ಖುರೆಟಾ ಲಾಂಚ್ ಪ್ಯಾಡ್‌ನ ಕಮಾಂಡರ್ ಎಂದು ಕರೆಯಲ್ಪಡುವ ಲಷ್ಕರ್-ಎ-ತೈಬಾದ ಅಬು ಕತಾಲ್ ಸಿಂಧಿ ಭಾನುವಾರ ಬೆಳಿಗ್ಗೆ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಬಹು ಮಾಧ್ಯಮ ವರದಿಗಳು ತಿಳಿಸಿವೆ. ಭಯೋತ್ಪಾದಕ ಕತಾಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದ ಮತ್ತು ಕೇಂದ್ರಾಡಳಿತ … Continued

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್‌ ಭಗತ್‌ ಸಿಂಗ್‌ ಭಯೋತ್ಪಾದಕ ಎಂದ ಪಾಕಿಸ್ತಾನ…!

ಪಾಕಿಸ್ತಾನದ ಲಾಹೋರಿನ ಶಾದ್ಮನ್ ಚೌಕಕ್ಕೆ ಮರುನಾಮಕರಣ ಮಾಡಿ ಅಲ್ಲಿ ಭಗತ್ ಸಿಂಗ್ ಪ್ರತಿಮೆ ನಿರ್ಮಿಸುವ ಪಾಕಿಸ್ತಾನದ ಯೋಜನೆಯನ್ನು ನಿವೃತ್ತ ಮಿಲಿಟರಿ ಅಧಿಕಾರಿಯೊಬ್ಬರ ಅಭಿಪ್ರಾಯದಿಂದಾಗಿ ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿಯ ಜಿಲ್ಲಾಡಳಿತವು ಲಾಹೋರ್‌ ಹೈಕೋರ್ಟ್‌ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಸಹಾಯಕ ಅಡ್ವೊಕೇಟ್ ಜನರಲ್ ಅಸ್ಗರ್ ಲೆಘರಿ ಅವರು ಶುಕ್ರವಾರ ಲಾಹೋರ್ ಹೈಕೋರ್ಟ್‌ಗೆ (ಎಲ್‌ಎಚ್‌ಸಿ) … Continued

ಕಾಶ್ಮೀರ : ಗಂದರಬಾಲ್‌ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರದೇಶದಲ್ಲಿ ಭಾನುವಾರ ಸಂಜೆ ಇಬ್ಬರು ವಲಸೆ ಕಾರ್ಮಿಕರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಸುರಂಗದ ಬಳಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಭದ್ರತಾ ಪಡೆಗಳು ದಾಳಿ ಸ್ಥಳಕ್ಕೆ ತಲುಪಿ ಪ್ರದೇಶವನ್ನು ಸುತ್ತುವರಿದಿವೆ. ಆರಂಭಿಕ ವರದಿಗಳ ಪ್ರಕಾರ, ದಾಳಿಗೊಳಗಾದ … Continued

ವೀಡಿಯೊ..| : ತಪ್ಪಿಸಿಕೊಳ್ಳಲು ಓಡಿಹೋದ ಭಯೋತ್ಪಾದಕ ; ಹೊಡೆದುರುಳಿಸಿದ ಭದ್ರತಾ ಪಡೆಗಳು : ಡ್ರೋನ್ ನಲ್ಲಿ ದೃಶ್ಯ ಸೆರೆ

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಶನಿವಾರ ಭದ್ರತಾ ಪಡೆಗಳು ಭಯೋತ್ಪಾಕನನ್ನು ಹೊಡೆದುರುಳಿಸುವ ಮೊದಲು ಆತ ತನ್ನ ರೈಫಲ್‌ನಿಂದ ಗುಂಡು ಹಾರಿಸುತ್ತ ಕಟ್ಟಡದಿಂದ ಹೊರಗೆ ಓಡಿಹೋದ ಕ್ಷಣವನ್ನು ತೋರಿಸುವ ಡ್ರೋನ್ ದೃಶ್ಯಗಳು ಹೊರಹೊಮ್ಮಿವೆ. ಬಾರಾಮುಲ್ಲಾದಲ್ಲಿ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ, ಅಧಿಕಾರಿಗಳು ಕಾರ್ಯಾಚರಣೆಯನ್ನು “ಗಮನಾರ್ಹ ಯಶಸ್ಸು” ಎಂದು … Continued