ಕೃಷಿ ಕಾನೂನು ಅನುಷ್ಠಾನ ಅವಧಿ ೨ ವರ್ಷಕ್ಕೆ ಹೆಚ್ಚಿಸಿದರೆ ರೈತರು ಹೋರಾಟ ಕೈಬಿಡಬಹುದು: ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್

ಕೇಂದ್ರ ಸರಕಾರ ನೂತನ ಕೃಷಿ ಕಾನೂನುಗಳ ಅನುಷ್ಠಾನದ ಅವಧಿಯನ್ನು ೧೮ ತಿಂಗಳುಗಳಿಂದ ೨೪ ತಿಂಗಳುಗಳಿಗೆ ಹೆಚ್ಚಿಸಿದರೆ ರೈತರು ಹೋರಾಟವನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ.
ಕೇಂದ್ರ ಸರಕಾರ ೧೮ ತಿಂಗಳವರೆಗೆ ನೂತನ ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದೂಡುವುದಾಗಿ ತಿಳಿಸಿದೆ. ೨ ವರ್ಷಗಳವರೆಗೆ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿದರೆ ರೈತರು ಹೋರಾಟವನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಮುಂದಿನ ತಿಂಗಳು ಗೋಧಿ ಕೊಯ್ಲು ನಡೆಯಲಿದ್ದು, ರೈತರು ತಮ್ಮ ಗದ್ದೆಗಳಿಗೆ ಮರಳಬೇಕಿದೆ ಎಂದು ತಿಳಿಸಿದ್ದಾರೆ. ಕಳೆದ ೯೦ ದಿನಗಳಿಂದ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜಯಲಲಿತಾ ಜನ್ಮದಿನವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿದ ಎಐಎಡಿಎಂಕೆ : ಅವರ ಎಐ ರಚಿತ ಧ್ವನಿ ಕ್ಲಿಪ್ ಬಿಡುಗಡೆ | ಆಲಿಸಿ

ನಿಮ್ಮ ಕಾಮೆಂಟ್ ಬರೆಯಿರಿ

advertisement