ಗೋಮಾತೆ ಮಹತ್ವ ಕುರಿತ ಆನ್‌ಲೈನ್‌ ಪರೀಕ್ಷೆ: ೫ ಲಕ್ಷ ಜನರ ನೋಂದಣಿ

ನವದೆಹಲಿ: ಸರಕಾರಿ ಸಂಸ್ಥೆ ರಾಷ್ಟ್ರೀಯ ಕಾಮಧೇನು ಆಯೋಗ ಫೆ.೨೫ರಂದು ನಡೆಸುವ ಭಾರತೀಯ ಗೋ ತಳಿಗಳ ಮಹತ್ವ ಕುರಿತು ನಡೆಸುವ ಆನ್‌ಲೈನ್‌ ಪರೀಕ್ಷೆಯನ್ನು ೫ ಲಕ್ಷ ಜನರು ಬರೆಯಲಿದ್ದಾರೆ.
ಗೋವುಗಳ ಮಹತ್ವ, ಗೋ ತಳಿಗಳು, ಗೋವುಗಳ ಗುಣವಿಶೇಷಗಳ ಕುರಿತು ಪರೀಕ್ಷೆ ನಡೆಸಲಾಗುತ್ತದೆ.
ಹಿಂದಿ, ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವ ಪರೀಕ್ಷೆಗೆ ಭಾರತದ ಪ್ರತಿಯೊಂದು ಜಿಲ್ಲೆಯ ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಶೇ. ೧೫ರಷ್ಟು ಜನರು ವಿದೇಶದವರೆಂಬುದು ವಿಶೇಷವಾಗಿದೆ. ಮಲೇಶಿಯಾ, ಯುಎಇ ಹಾಗೂ ಪಾಕಿಸ್ತಾನದಿಂದ ಕೂಡ ಸಾಕಷ್ಟು ಜನರು ಹೆಸರು ನೋಂದಾಯಿಸಿದ್ದಾರೆ. ಹಸುಗಳ ಬಗ್ಗೆ ಭಾರತೀಯರಲ್ಲಿ ಆಸಕ್ತಿ ಮೂಡಿಸುವುದು. ಹಾಲು ನೀಡುವುದನ್ನು ನಿಲ್ಲಿಸಿದ ನಂತರವೂ ಗೋವಿನ ಮೂತ್ರ ಹಾಗೂ ಸಗಣಿಯಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಗೋಮೂತ್ರದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುವ ಶಕ್ತಿಯಿದೆ. ಸಗಣಿಯಿಂದ ಉಲವಾರು ಅಲಂಕಾರಿಕ ಸಾಮಗ್ರಿಗಳನ್ನು ಮಾಡಬಹುದಾಗಿದೆ. ಒಟ್ಟಿನಲ್ಲಿ ಭಾರತೀಯ ತಳಿ ಹಸುಗಳ ವಿಶೇಷತೆ ಜನರಿಗೆ ತಿಳಿಸಬೇಕಿದೆ ಎಂದು ಆಯೋಗದ ವಕ್ತಾರ ಪುರೀಶ ಕುಮಾರ ತಿಳಿಸಿದ್ದಾರೆ.
ಹಾಲು, ತುಪ್ಪ, ಮೊಸರು, ಮೂತ್ರ ಮತ್ತು ಸಗಣಿ ಇವು ಹಸುಗಳು ಮಾನವಕುಲಕ್ಕೆ ನೀಡುವ ಐದು ಮಹತ್ತರ ಕೊಡುಗೆಗಳಾಗಿವೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರಿಗೆ ಬಹುಮಾನ ನೀಡಲಾಗುವುದಲ್ಲದೇ ಪರೀಕ್ಷೆ ಬರೆದ ಎಲ್ಲರಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಹಿಂದಿನ ಜಗನ್ ಸರ್ಕಾರ ಆಡಳಿತದಲ್ಲಿ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ; ಚಂದ್ರಬಾಬು ನಾಯ್ಡು ಗಂಭೀರ ಆರೋಪ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement