ಗ್ರಾಮದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ವಿದ್ಯಾರ್ಥಿಗಳ ಶ್ರಮದಾನ

ಒಡಿಶಾ ಮಲ್ಕಂಗಿರಿ ಜಿಲ್ಲೆಯ ಗ್ರಾಮವೊಂದರ ಶಾಲೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದಿಂದ ಶಾಲೆಗೆ ಹೋಗುವ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡಿದ್ದಾರೆ.
ತಲಕಟಾ ಮಾಧ್ಯಮಿಕ ಶಾಲೆಯ ಪಡಲ್‌ಪುಟ್‌ ಗ್ರಾಮದ ವಿದ್ಯಾರ್ಥಿಗಳು ಇಡೀ ದಿನ ಶ್ರಮದಾನ ಮಾಡಿದರು. ಸಲಿಕೆ, ಬುಟ್ಟಿ ತಂದು ಬುಟ್ಟಿಗಳಲ್ಲಿ ಮಣ್ಣು ತುಂಬಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ೨ ಕಿ.ಮೀ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಸಿಕೊಂಡರು.
ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದರೂ ರಸ್ತೆಯ ಅಭಿವೃದ್ಧಿಗೆ ಗಮನ ಹರಿಸದಿದ್ದರಿಂದ ಬೇಸತ್ತ ವಿದ್ಯಾರ್ಥಿಗಳು ತಾವೇ ಖುದ್ದಾಗಿ ರಸ್ತೆ ದುರಸ್ತಿ ಮಾಡಿಕೊಂಡರು.
ಈ ವರ್ಷ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಅನುಸರಿಸಿ, ಪಡಲ್‌ಪುಟ್‌ನಲ್ಲಿರುವ ಏಕೈಕ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಯನ್ನು ಮುಚ್ಚಿ ತಲಕಟಾ ಗ್ರಾಮದ ಶಾಲೆಯಲ್ಲಿ ವಿಲೀನಗೊಳಿಸಲಾಯಿತು. ಲಾಕ್‌ಡೌನ್ ನಂತರ ಶಾಲೆಗಳು ಭಾಗಶಃ ಪುನರಾರಂಭಗೊಂಡಂತೆ, ಪಡಲ್‌ಪುಟ್‌ನ ಮಕ್ಕಳು ಹೊಸ ಶಾಲೆಗೆ 5 ಕಿ.ಮೀ ಮಾರ್ಗವನ್ನು ಕ್ರಮಿಸಬೇಕಾಯಿತು.  ಇದರಲ್ಲಿ ಪದಲ್‌ಪುಟ್ ಮತ್ತು ಮಜಿಗುಡಾ ನಡುವಿನ ೨ ಕಿ.ಮೀ. ರಸ್ತೆ ಹಾನಿಗೀಡಾಗಿದೆ. ಹಲವು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಶಾಲೆಗೆ ಹೋಗುವಾಗ ಅಪಘಾತಕ್ಕೀಡಾಗಿದ್ದರು.
ರಸ್ತೆ ದುರಸ್ತಿ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಿಯ ಸ್ವಯಂ ಸೇವಾ ಸಂಘಟನೆಯ ಸದಸ್ಯರು ಹಾಗೂ ಸ್ವಸಹಾಯ ಗುಂಪಿನ ಮಹಿಳೆಯರು ನೆರವಾದರು.
ನಾವು ಖಡಿ, ಮಣ್ಣು ಸಾಗಿಸಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದ್ದೇವೆ, ಸ್ವಸಹಾಯ ಸಂಘದ ಮಹಿಳೆಯರು ವೇತನವಿಲ್ಲದೆ ದುಡಿಯಲು ಒಪ್ಪಿಕೊಂಡರು. ಎಲ್ಲರ ಸಹಕಾರದಿಂದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆ. ಬಾಲ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳುವುದು ಸರಿಯಲ್ಲ. ಮಕ್ಕಳ ಪಾಲಕರು ರಸ್ತೆ ದುರಸ್ತಿ ಮಾಡುತ್ತಿದ್ದರು. ಬಹುಷಃ ಅವರು ತಮ್ಮ ಮಕ್ಕಳನ್ನು ಕರೆತಂದಿರಬಹುದು. ದುರಸ್ತಿ ಕಾರ್ಯಕ್ಕೆ ಹಣ ಸಂಗ್ರಹ ಮಾಡಿದ ಬಗ್ಗೆ ನಮಗೆ ತಿಳಿದಿಲ್ಲ ಎಂದ ಮಲ್ಕಂಗಿರಿ ಜಿಲ್ಲಾಧಿಕಾರಿ ವೈ.ವಿಜಯ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement