ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಕಿರೀಟವನ್ನು ಭಾನುವಾರ ಜೋಕೋವಿಚ್ ಮುಡಿಗೇರಿಸಿಕೊಂಡಿದ್ದಾರೆ.
ಮೆಲ್ಬೋರ್ನ್ ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರಷ್ಯಾದ ಡೇನಿಯಲ್ ಮೆಡ್ ವೆ ದೇವ್ ಅವರನ್ನು 7-5 ,6-2,6-2 ನೇರ್ ಸೆಟ್‌ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಇದು ಅವರ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ರೋಜರ್ ಫೆಡರರ್ ಮತ್ತು ರಪೇಲ್ ನಡಾಲ್ ಅವರು ತಲಾ 20 ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
ಅಂತಿಮ ಪಂದ್ಯದಲ್ಲಿ ರಷ್ಯಾದ ಪ್ರತಿಸ್ಪರ್ಧಿ ಆಟಗಾರರಾದ 25 ವರ್ಷದ ಮೆಡ್ ವೆ ದೇವ್ ಅವರಿಂದ ಪೈಪೋಟಿ ಎದುರಾದರೂ ಅಂತಿಮವಾಗಿ ನೊವಾಕ್ ಜೋಕೋವಿಚ್ ನೇರ ಸೆಟ್‌ಗಳಿಂದ ಜಯಗಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ