ಬದಾಮಿಯಲ್ಲಿ ನನ್ನ ಸೋಲಿಗೆ ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ: ಸಚಿವ ಶ್ರೀರಾಮುಲು

ಮೊಳಕಾಲ್ಮೂರು: ಬದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಾನು ಸೋಲನುಭವಿಸಲು ಮತದಾರರಲ್ಲ, ಕೆಲ ಬಿಜೆಪಿ ಮುಖಂಡರ ಷಡ್ಯಂತ್ರವೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ಹೇಳಿದರು.
ಕೆಲವು ಬಿಜೆಪಿ ನಾಯಕರ ಷಡ್ಯಂತ್ರವೇ ನನ್ನ ಸೋಲಿಗೆ ಕಾರಣ. ನಾನು ಬದಾಮಿ ಕ್ಷೇತ್ರದಲ್ಲಿ ಗೆದ್ದರೆ ಎಲ್ಲಿ ತಮಗೆ ಮುಳುವಾಗಬಹುದೆಂದು ಕೆಲವರು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಂತೆ ಸಣ್ಣ ಬೇಡರ ಕುಲದಲ್ಲಿ ಜನಿಸಿದ ನಾನು ಎರಡು ಕಡೆ ಸ್ಪರ್ಧಿಸಿದ್ದೆ. ಬದಾಮಿಯಲ್ಲಿ ಕೇವಲ ೧೪೦೦ ಮತಗಳ ಅಂತರದಿಂದ ಸೋತೆ. ಒಂದು ವೇಳೆ ಮೊಳಕಾಲ್ಮೂರು ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರೆ ೩೦ ವರ್ಷಗಳ ನನ್ನ ರಾಜಕೀಯ ಜೀವನ ನಾಶವಾಗುತ್ತಿತ್ತು. ಮೊಳಕಾಲ್ಮೂರು ಕ್ಷೇತ್ರದ ಜನರ ಉಪಕಾರವನ್ನು ನಾನು ಎಂದಿಗೂ ಮರೆಯುವುದುಲ್ಲ ಎಂದು ತಿಳಿಸಿದರು.
ಪಕ್ಷದಲ್ಲಿ ನನ್ನ ವಿರುದ್ಧ ನಿರಂತರ ಪಿತೂರಿ ನಡೆಯುತ್ತಿದೆ. ಆದರೆ ಅದರ ಬಗ್ಗೆ ಪಕ್ಷದ ವೇದಿಕೆಯಲ್ಲಿಯೇ ಮಾತನಾಡುತ್ತೇನೆ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement