ವ್ಯಾಲೆಂಟೈನ್‌ ಡೇ: ವಿಧ್ವಂಸಕತೆಯಿಂದ ಮೌನಕ್ಕೆ ಶರಣಾದ ಶಿವಸೇನೆ, ಕಾರಣ..?

ಕಳೆದ ಭಾನುವಾರ, ದೇಶಾದ್ಯಂತ ಅನೇಕರು ಪ್ರೇಮಿಗಳ ದಿನ (ವ್ಯಾಲೆಂಟೈನ್‌ ಡೇ) ಆಚರಿಸಿದಾಗ, ಶಿವಸೇನೆ ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಭೋಪಾಲ್‌ನ ರೆಸ್ಟೋರೆಂಟ್‌ಗೆ ದಾಳಿ ಆಸ್ತಿ ಧ್ವಂಸ ಮಾಡಿದರು. ಅವರು ಅಲ್ಲಿದ್ದವರೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಪ್ರೇಮಿಗಳ ದಿನವನ್ನು ಆಚರಿಸುವುದು ಭಾರತೀಯ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು..
ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಧಿಕಾರಕ್ಕೆ ಬಂದ ತಕ್ಷಣವೇ ‘ಉದಾರವಾದಿ’ ಮುಖ ತೋರುತ್ತಿರುವ ಶಿವಸೇನೆಯು ಈ ಘಟನೆಯಿಂದ ದೂರ ಸರಿಯಲು ಪ್ರಯತ್ನಿಸಿತು. ಶಿವಸೇನೆ ರಾಜ್ಯಸಭಾ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಘಟನೆಯಿಂದ ಶಿವಸೇನೆಯನ್ನು ತಕ್ಷಣವೇ ದೂರವಿಟ್ಟರು.ವಿಡಿಯೊದಲ್ಲಿ ಮಾಜಿ ಬಿಜೆಪಿ ಶಾಸಕರೊಂದಿಗೆ ಇರುವವರಿಗೂ ಶಿವಸೇನೆಗೂ ಯಾವುದೇ ಸಂಬಂಧವಿಲ್ಲ. ಈ ಕೃತ್ಯವನ್ನು ಮತ್ತು ನಮ್ಮ ಪಕ್ಷದ ಲೋಗೊವನ್ನು ಉದ್ದೇಶಪೂರ್ವಕವಾಗಿ ಬಳಸುವುದನ್ನು ಬಲವಾಗಿ ಖಂಡಿಸುತ್ತೇವೆ. ಅಗತ್ಯ ಕ್ರಮ ಕೈಗೊಳ್ಳುವಂತೆ ನಾವು ಮಧ್ಯಪ್ರದೇಶ ಪೊಲೀಸರನ್ನು ಒತ್ತಾಯಿಸುತ್ತೇವೆ ”ಎಂದು ಅವರು ತಕ್ಷಣವೇ ಟ್ವೀಟ್ ಮಾಡಿರುವುದು ಶಿವಸೇನೆ ತನ್ನ ಉದಾರವಾದಿ ಮುಖದ ಪ್ರದರ್ಶವನ್ನು ಮುಂದುವರಿಸಲಿದೆ ಎಂಬುದು ಸ್ಪಷ್ಟವಾಗುತ್ತದೆ.
ಕೆಲವೇ ವರ್ಷಗಳ ಹಿಂದೆ, ಪ್ರೇಮಿಗಳ ದಿನಾಚರಣೆಯ ವಿರುದ್ಧ ಶಿವಸೇನೆ ಕಾರ್ಯಕರ್ತರು ಇಂತಹ ಕೃತ್ಯ ಆ ಪಕ್ಷವು ಅದನ್ನು ಸಮರ್ಥಿಸಿಕೊಳ್ಳುತ್ತಿತ್ತು.
ಪ್ರತಿವರ್ಷ ಪ್ರೇಮಿಗಳ ದಿನದಂದು, ಶಿವಸೇನೆ ಎನ್ನುವುದು ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿನ ರೆಸ್ಟೋರೆಂಟ್‌ಗಳು, ಬಾರ್‌ಗಳು, ಉಡುಗೊರೆ ಅಂಗಡಿಗಳ ಮಾಲೀಕರು ಮತ್ತು ಯುವ ದಂಪತಿಗಳು ಸಹ ಭಯಭೀತರಾಗಲು ಕಾರಣವಾಗಿತ್ತು..
ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯರ ನೇತೃತ್ವದಲ್ಲಿ ಶಿವಸೇನೆ ಕಾಂಗ್ರೆಸ್‌ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ ಜೊತೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ ನಂತರ ಬದಲಾದ ಸನ್ನಿವೇಶದಲ್ಲಿ ಮೃದು ಮತ್ತು ಉದಾರವಾದಿ ಧೋರಣೆಗೆ ಪರಿವರ್ತನೆಯಾಗುತ್ತಿದ್ದಂತೆ, ಪ್ರೇಮಿಗಳ ದಿನದ ವಿರುದ್ಧ ಮಹಾರಾಷ್ಟ್ರದಲ್ಲಿ ಪಕ್ಷದ ಪ್ರತಿಭಟನೆಗಳು ಸಹ ನಿಂತುಹೋದವು.
ಪ್ರತಿಭಟನೆಗಳು ನಿಂತುಹೋದರೂ, ಪ್ರೇಮಿಗಳ ದಿನಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಿದ್ಧಾಂತ ಬದಲಾಗಿಲ್ಲ ಎಂದು ಶಿವಸೇನೆ ಈಗಲೂ ಹೇಳುತ್ತದೆ. ನಾವು ಯಾವಾಗಲೂ ಪ್ರೇಮಿಗಳ ದಿನದ ಪಾಶ್ಚಿಮಾತ್ಯ ಆಚರಣೆ ವಿರೋಧಿಸಿದ್ದೇವೆ, ನಮ್ಮ ವಿರೋಧವು ಪ್ರೇಮಿಗಳ ದಿನದ ಅಸಹ್ಯಕರ ಪ್ರದರ್ಶನಕ್ಕೆ ಇದ್ದೇ ಇದೆ ಎಂದು ಶಿವಸೇನೆ ನಾಯಕರು ಹೇಳುತ್ತಾರೆ,
ಜೊತೆಗೆ ಜನರು ಈಗ ಪ್ರೇಮಿಗಳ ದಿನವನ್ನು ಭಾರತೀಯ ಸಂಸ್ಕೃತಿಗೆ ತಕ್ಕಂತೆ ಆಚರಿಸುತ್ತಾರೆ, ಮತ್ತು ಇದರ ಹೆಚ್ಚಿನ ಶ್ರೇಯಸ್ಸು ಶಿವಸೇನೆಯ ಪಟ್ಟುಹಿಡಿದ ಪ್ರತಿಭಟನೆಗೆ ಸಲ್ಲುತ್ತದೆ ಎಂದೂ ಹೇಳುತ್ತಾರೆ.
“ನಮ್ಮ ವಿರೋಧವು ಆಚರಣೆಯ ವಿಕೃತಿ ಸ್ವರೂಪಕ್ಕೆ ಇದೆ. ಪುರುಷರು ಗುಲಾಬಿಗಳು ಮತ್ತು ಶುಭಾಶಯ ಪತ್ರಗಳಿಂದ ಮಹಿಳೆಯರಿಗೆ ಕಿರುಕುಳ ನೀಡುವುದು, ದಂಪತಿಗಳು ಸಾರ್ವಜನಿಕವಾಗಿ ಚುಂಬಿಸುವುದು ಮತ್ತು ತಬ್ಬಿಕೊಳ್ಳುವುದು. ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ಕುರುಡು ಆಚರಣೆಗೆ ವಿರುದ್ಧ ಇದ್ದೇವೆ ಎಂದು ಅವರು ಹೇಳುತ್ತಾರೆ.

ವ್ಯಾಲಂಟೈನ್‌ ಡೇ ಮತ್ತು ಶಿವಸೇನೆ: 1990 ರ ದಶಕದ ಉತ್ತರಾರ್ಧದಲ್ಲಿ ಭಾರತದಲ್ಲಿ ವ್ಯಾಲಂಟೈನ್‌ ಡೇ ಜನಪ್ರಿಯಗೊಳ್ಳಲು ಆರಂಭವಾಗುತ್ತಿದ್ದಂತೆ ಶಿವಸೇನೆ ಹೊಸ ರಾಜಕೀಯ ಕಾರ್ಯಸೂಚಿಯನ್ನು ಕಂಡುಕೊಂಡಿತು. ಬಲಪಂಥೀಯ ಹಿಂದುತ್ವ ಹಾಗೂ ಪಾಶ್ಚಿಮಾತ್ಯ ವಿರೋಧಿ ನಿಲುವು.
ಶಿವಸೇನೆ ಕಾರ್ಯಕರ್ತರು ಪ್ರೇಮಿಗಳ ದಿನದ ಶುಭಾಶಯ ಪತ್ರಗಳನ್ನು ಮಾರಾಟ ಮಾಡುವ ಉಡುಗೊರೆ ಅಂಗಡಿಗಳನ್ನು ಧ್ವಂಸಗೊಳಿಸುವುದು ಮಹಾರಾಷ್ಟರದಲ್ಲಿ ಅದರಲ್ಲಯೂ ಮೂಬೈನಲ್ಲಿ ಜೋರಾಗಿತ್ತು. ಮುಂಬೈನ ಸಮುದ್ರ ಮುಂಭಾಗ ಮತ್ತು ಸಾರ್ವಜನಿಕ ಉದ್ಯಾನವನದಲ್ಲಿರುವ ಪ್ರೇಮಿಗಳನ್ನು ಗುರುತಿಸಿ ಕೆಲವೊಮ್ಮೆ ಅವರನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು.
ಗ್ರೀಟಿಂಗ್ ಕಾರ್ಡ್ ಮತ್ತು ಉಡುಗೊರೆ ಕಂಪನಿ ಆರ್ಕೀಸ್ನವರು 2002ರಲ್ಲಿ ಶಿವಸೇನೆ ತನ್ನ ಮಳಿಗೆಗಳನ್ನು ಗುರಿಯಾಗಿಸಬಹುದೆಂಬ ಆತಂಕದಿಂದ ಶಿವಸೇನೆ ವಿರುದ್ಧ ನ್ಯಾಯಾಲಯಕ್ಕೂ ಹೋಗಿತ್ತು. ಆದರೆ ಈಗ ಕಾಲಬದಲಾಗಿದೆ. ಶಿವಸೇನೆ ಅಧಿಕಾರದಲ್ಲಿದೆ, ಅದೂ ತಮ್ಮನ್ನು ತಾವು ಜಾತ್ಯತೀತ ಎಂದು ಕರೆದುಕೊಳ್ಳುವ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಹಾಗೂ ಕಾಂಗ್ರೆಸ್‌ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ರಚಿಸಿದ್ದು ಬಾಳಾ ಠಾಕ್ರೆ ಪುತ್ರ ಉದ್ಧವ ಠಾಕ್ರೆ ಈಗ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದಾರೆ. ಅವರ ಮಗ ಆದಿತ್ಯ ಠಾಕ್ರೆ ಸಚಿವರಾಗಿದ್ದಾರೆ.ಹೀಗಾಗಿ ಶಿವಸೇನೆಯೂ ಬದಲಾದಂತೆ ತೋರುತ್ತಿದ್ದು ಹಲವಾರು ವಿಚಾರದಲ್ಲಿ ಉದಾರ ಮುಖ ತೋರ್ಪಡಿಸುತ್ತಿದೆ. ಅದರ ಮುಖವಾಣಿ ಸಾಮ್ನಾದಲ್ಲಿ ಈ ವ್ಯಾಲಂಟೈನ್‌ ಡೇ ತೀಕ್ಷ್ಣವಾಗಿ ಖಂಡಿಸುವ ಸುದ್ದಿಯಿರುವುದಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತರು ವ್ಯಾಲಂಟೈನ್‌ ಡೇ ದಿನ ಹೊಟೇಲ್‌, ಪಬ್‌ಗಳಿಗೆ ದಾಳಿ ಮಾಡಿದರೆ ಅದನ್ನು ಶಿವಸೇನೆ ಈಗ ಖಂಡಿಸುತ್ತದೆ. ಯಾಕೆಂದರೆ ಈಗ ಅದು ಅಧಿಕಾರದಲ್ಲಿದೆ…!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement