ಖ್ಯಾತ ಓಟಗಾರ್ತಿ ಪಿ.ಟಿ.ಉಷಾ ಬಿಜೆಪಿಗೆ..?: ಅಲ್ಲಗಳೆದ ಆಪ್ತ ವಲಯ

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈಗ ರಾಜಕೀಯ ಮೆಟ್ರೋ ಮ್ಯಾನ್ ಶ್ರೀಧರನ್ ನಂತರ ಪಿಟಿ ಉಷಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ.
ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಆದರೆ ಅವರ ಆಪ್ಕೇತ ವಲಯ ಈ ಸುದ್ದಿಯನ್ನು ನಿರಾಕರಿಸಿದೆ.   ಕೇರಳದಲ್ಲಿ ಪ್ರಬಲವಾಗಿ ನೆಲೆಯೂರಲು ಸಿದ್ಧತೆ ನಡೆಸಿರುವ ಬಿಜೆಪಿ ಇದಕ್ಕಾಗಿ ವಿವಿಧ ಕ್ಷೇತ್ರಗಳ ಸಾಧಕರನ್ನು ಪಕ್ಷಕ್ಕೆ ಆಹ್ವಾನಿಸುತ್ತಿದೆ. ಮೊನ್ನೆಯಷ್ಟೇ ದೇಶಾದ್ಯಂತ ಮೆಟ್ರೊ ಮ್ಯಾನ್‌ ಎಂದೇ ಕರೆಸಿಕೊಳ್ಳುವ ಇ.ಶ್ರೀಧರನ್‌ ಬಿಜೆಪಿಗೆ ಸೇರ್ಪಡೆಯಾಗಿದ್ದು ಈಗ ಮಾಜಿ ಒಲಂಪಿಕ್‌ ಓಟಗಾರ್ತಿ ಪಿ.ಟಿ.ಉಷಾ ಬಿಜೆಪಿ ಸೇರುತ್ತಾರೆಂದು ಕೇರಳದಲ್ಲಿ ದಟ್ಟ ಸುದ್ದಿಯಾಗಿದೆ. ಆದರೆ ಈ ಸುದ್ದಿಯನ್ನು ಉಷಾ ಅವರ ಆಪ್ತ ವಲಯಗಳು ನಿರಾಕರಿಸಿವೆ.
ಈ ಸುದ್ದಿಗೆ ಪುಷ್ಟಿ ನೀಡುವಂತೆ ಪಿಟಿ ಉಷಾ ಸಹ ಕೆಲವು ದಿನಗಳಿಂದ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ಬೆಂಬಲ ನೀಡುತ್ತಿರುವುದು ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ಪ್ರತಿಭಟನಾನಿರತ ರೈತರಿಗೆ ಬೆಂಬಲವಾಗಿ ನೀಡಿದ್ದ ಹೇಳಿಕೆಯನ್ನು ಪಿಟಿ ಉಷಾ ಖಂಡಿಸಿ, ಕೇಂದ್ರ ಸರ್ಕಾರದ ಬಗ್ಗೆ ಸಕಾರಾತ್ಮಕವಾಗಿ ಟ್ವೀಟ್ ಮಾಡಿದ್ದರು.
ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಿಟಿ ಉಷಾ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇರಳದಲ್ಲಿ ದಟ್ಟವಾಗಿದೆ. ಆದರೆ ಪಿ.ಟಿ.ಉಷಾ ಅವರ ಆಪ್ತ ವಲಯ ಇದನ್ನು ಅಲ್ಲಗಳೆದಿದೆ. ಅಂಥ ಯಾವುದೇ ಮಾಹಿತಿಯಿಲ್ಲ ಎಂದು ಹೇಳಿದೆ.
ಕೇರಳದಲ್ಲಿ ಎಪ್ರಬಲವಾಗಿ ನೆಲೆಯೂರಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಇದೇ ಸಮಸಯದಲ್ಲಿ ಕಾಂಗ್ರೆಸ್‌ ಕೂಡ ಎಡಪಂಥೀಯರಿಂದ ಅಧಿಕಾರ ಪಡೆಯಲು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಂತ್ರಗಾರಿಕೆ ರೂಪಿಸುತ್ತಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement