ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ತಮ್ಮ ನೇತೃತ್ವದಲ್ಲಿಯೇ ತೃತಿಯ ರಂಗ ರಚನೆಯಾಗಲಿದೆ ಎಂದು ನಟ ಹಾಗೂ ಮಕ್ಕಳ ನೀಧಿ ಮಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ತಿಳಿಸಿದ್ದಾರೆ.
ಮೈತ್ರಿ ಕುರಿತು ಡಿಎಂಕೆ ನಾಯಕರಿಂದ ಆಹ್ವಾನ ಬಂದರೆ ಅದನ್ನು ಪರಿಗಣಿಸಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಎಐಎಡಿಎಂಕೆ-ಬಿಜೆಪಿ, ಡಿಎಂಕೆ-ಕಾಂಗ್ರೆಸ್ ಮೈತ್ರಿ ಅಸ್ತಿತ್ವದಲ್ಲಿವೆ. ತೃತಿಯ ರಂಗ ರೂಪಗೊಳ್ಳಲು ಪೂರಕ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ರಜನಿಕಾಂತ್ ಆರೋಗ್ಯ ಸ್ಥಿತಿಯ ಹಿನ್ನೆಲೆಯಲ್ಲಿ ರಾಜಕೀಯದಿಂದ ದೂರ ಉಳಿದಿದ್ದಾರೆ. ಆಮ್ ಆದ್ಮಿ ಪಕ್ಷ ಸೇರಿದಂತೆ ಜನರ ಉದ್ಧಾರಕ್ಕಾಗಿ ಚಿಂತಿಸುವವರಿಗೆಲ್ಲ ತೃತಿಯ ರಂಗಕ್ಕೆ ಸ್ವಾಗತವಿದೆ ಎಂದು ತಿಳಿಸಿದರು. ತಮಿಳುನಾಡಿನಲ್ಲಿ ಮೇ-ಜೂನ್ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ