ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ

ಸಿದ್ದಾಪುರ: ಧಾರ್ಮಿಕ ಬೆಳವಣಿಗೆಯಿಂದ ಸಾಮಾಜಿಕ ಬೆಳವಣಿಗೆ ಸಾಧ್ಯ ಎಂದು ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಹೇಳಿದರು.
ಅವರು ಪಟ್ಟಣದ ಸೊರಬ ರಸ್ತೆಯಲ್ಲಿನ ಶ್ರೀ ಮುರುಘಾಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗುವ ಅನುಭವ ಮಂಟಪ, ಸಮುದಾಯ ಭವನ ಮತ್ತು ಶ್ರೀಮಠದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಆಧುನಿಕ ಜೀವನದಲ್ಲಿ ಭೌತಿಕ, ವೈಜ್ಞಾನಿಕ, ತಾಂತ್ರಿಕ ಬೆಳವಣಿಗೆಗಳು ಅತಿ ವೇಗವಾಗಿ ಸಂಭವಿಸುತ್ತಿವೆ. ಇದೆಲ್ಲದರ ಜೊತೆಗೆ ತಾತ್ವಿಕ, ಬೌದ್ಧಿಕ, ಮೌಲಿಕ ಬೆಳವಣಿಗೆಯನ್ನೂ ಸಾಧಿಸಬೇಕಿದೆ. ಇದಕ್ಕೆ ಧಾರ್ಮಿಕ ಬೆಳವಣಿಗೆ ಅಗತ್ಯವಾಗಿದೆ. ಇದರಿಂದಲೇ ಸಾಮಾಜಿಕ ಬೆಳವಣಿಗೆಯೂ ಸಾಧ್ಯವಿದೆ ಎಂದರು.
ಇಲ್ಲಿನ ಮುರುಘಾಮಠಕ್ಕೂ, ಚಿತ್ರದುರ್ಗ ಮಠಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಹಿಂದಿನ ಸ್ವಾಮಿಗಳು ಈ ಮಠದಲ್ಲಿ ಮೊಕ್ಕಾಂ ಮಾಡುತ್ತಿದ್ದರು. ಹಲವು ಕಾರಣಗಳಿಂದ ಇದು ನಿರ್ಲಕ್ಷಕ್ಕೆ ಒಳಗಾಗಿದ್ದು ಮುಂದಿನ ದಿನಗಳಲ್ಲಿ ಇದು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯಲಿದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆಯವರ ಜೊತೆ ಮಾತನಾಡಲಾಗಿದೆ. ಎಲ್ಲರ ಸಹಕಾರದಿಂದ ಒಂದೆರಡು ವರ್ಷಗಳಲ್ಲಿ ಕಟ್ಟಡ ನಿರ್‍ಮಾಣವಾಗಲಿದೆ ಎಂದರು.
ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿದರು.
ಸಿ.ಎಸ್.ಗೌಡರ್ ಸ್ವಾಗತಿಸಿದರು. ನಾಗರಾಜ ಗೌಡರ್ ನಿರೂಪಿಸಿದರು.
ಫೋಟೊಪೈಲ್- ೨೨ಎಸ್ಡಿಪಿ೪- ಸಿದ್ದಾಪುರದಲ್ಲಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಪ್ರಮುಖ ಸುದ್ದಿ :-   ಯಲ್ಲಾಪುರ : ಗಂಗಾಧರ ಕೊಳಗಿ ಸೇರಿ ಮೂವರಿಗೆ 'ವನರಾಗ ಪುಸ್ತಕ ಪ್ರಶಸ್ತಿ' ಪ್ರದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement