ಪಶ್ಚಿಮ ಬಂಗಾಳ ಪರಿವರ್ತನೆಗೆ ಮನಸು ಮಾಡಿದೆ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪರಿವರ್ತನೆಗೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯವು ಪರಿವರ್ತನೆಗೆ ಮನಸು ಮಾಡಿದೆ. ಜನರ ಉತ್ಸಾಹವು ಕೋಲ್ಕತ್ತದಿಂದ ದೆಹಲಿಗೆ ಸಂದೇಶ ಕಳಿಸುತ್ತಿದೆ ಎಂದರು.
ಕಳೆದ ಬಾರಿ ನಾನು ಅನಿಲ ಸಂಪರ್ಕ ಯೋಜನೆಗೆ ಚಾಲನೆ ನೀಡಲು ಬಂದಿದ್ದೆ. ಆದರೆ ಈ ಬಾರಿ ರೈಲ್ವೆ ಸೌಲಭ್ಯಗಳನ್ನು ನೀಡಲು ಬಂದಿದ್ದೇನೆ. ಈ ವರ್ಷ ರೈಲು ಹಾಗೂ ಮೆಟ್ರೊ ಕೇಂದ್ರ ಸರಕಾರದ ಆದ್ಯತೆಯಾಗಿದೆ. ರೈಲು ಮಾರ್ಗಗಳ ವಿದ್ಯುದ್ದೀಕರಣಕ್ಕೆ ಒತ್ತು ನೀಡಲಿದ್ದೇವೆ ಎಂದರು.
ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಕೇಂದ್ರದ ಯೋಜನೆಗಳ ಪ್ರಯೋಜನವನ್ನು ರಾಜ್ಯದ ಜನರಿಗೆ ನೀಡುತ್ತಿಲ್ಲ ಎಂದು ಮತ್ತೊಮ್ಮೆ ಆರೋಪಿಸಿದರು. ಕೇಂದ್ರವು ಹಣವನ್ನು ನೇರವಾಗಿ ರೈತರು ಮತ್ತು ಬಡವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಆದರೆ ಈ ಯೋಜನೆಗಳ ಲಾಭಗಳು ಟಿಎಂಸಿಯ ಮುಖಂಡರ ಒಪ್ಪಿಗೆಯಿಲ್ಲದೆ ಬಡವರಿಗೆ ತಲುಪುವುದಿಲ್ಲ. ಇದಕ್ಕಾಗಿಯೇ ಟಿಎಂಸಿ ನಾಯಕರು ಶ್ರೀಮಂತರಾಗುತ್ತಿದ್ದಾರೆ ಮತ್ತು ಸಾಮಾನ್ಯ ಕುಟುಂಬಗಳು ಬಡವರಾಗುತ್ತಿವೆ ಎಂದು ಪ್ರಧಾನಿ ಹೇಳಿದರು.
ಬಹುಪಾಲು ಬಂಗಾಳದ ಮನೆಗಳಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುವುದಿಲ್ಲ. ಕೇಂದ್ರದ ಯೋಜನೆ ಪ್ರಾರಂಭವಾದಾಗಿನಿಂದ ಕೇಂದ್ರವು 3.6 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕಗಳನ್ನು ಒದಗಿಸಿದ್ದರೂ, ರಾಜ್ಯವು ಯೋಜನೆಯ ಪ್ರಯೋಜನ ಪಡೆಯಲು ನಿರಾಸಕ್ತಿ ತೋರಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   1ನೇ ತರಗತಿಗೆ ಪ್ರವೇಶ ಪಡೆಯಲು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement