ವರವರ ರಾವ್‌ಗೆ ೬ ತಿಂಗಳ ಮಧ್ಯಂತರ ಜಾಮೀನು ನೀಡಿದ ಮುಂಬೈ ಹೈಕೋರ್ಟ್‌

ಎಲ್ಗರ್ ಪರಿಷತ್-ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ 81 ವರ್ಷದ ವರವರ ರಾವ್ ಅವರಿಗೆ ಮುಂಬೈ ಹೈಕೋರ್ಟ್ ಸೋಮವಾರ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ.
ಆಗಸ್ಟ್ 2018ರಿಂದ ವಿಚಾರಣೆಗೆ ಕಾಯುತ್ತಿರುವ ರಾವ್, ಆರು ತಿಂಗಳ ಜಾಮೀನು ಅವಧಿಯ ನಂತರ ಶರಣಾಗಬೇಕು ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ರಾವ್ ಅವರು ಮುಂಬೈಯಲ್ಲಿಯೇ ಇರಬೇಕು ಮತ್ತು ತನಿಖೆಗೆ ಲಭ್ಯವಾಗಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ನ್ಯಾಯಾಲಯವು 50,000 ರೂ. ವೈಯಕ್ತಿಕ ಬಾಂಡ್‌ ನೀಡಲು ಸೂಚಿಸಿದೆ ಮತ್ತು ಎನ್ಐಎ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಹೇಳಿದೆ.
. ಆದಾಗ್ಯೂ, ಅವರು ಎನ್ಐಎ ನ್ಯಾಯಾಲಯದ ಮುಂದೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ಹೇಳಿದೆ. ರಾವ್ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಮತ್ತು ಆರು ತಿಂಗಳ ಅವಧಿಗೆ ಮುಂಬೈನ ಎನ್ಐಎ ಕೋರ್ಟ್  ವ್ಯಾಪ್ತಿಯಲ್ಲಿ ಅವರು ಉಳಿಯಬೇಕಿದೆ.

ನ್ಯಾಯಮೂರ್ತಿಗಳಾದ ಎಸ್. ಎಸ್. ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠವು ರಾವ್ ಅವರಿಗೆ ವೈದ್ಯಕೀಯ ಜಾಮೀನು ನೀಡದಿದ್ದರೆ, ಅದು ಮಾನವ ಹಕ್ಕುಗಳ ತತ್ವಗಳನ್ನು ರಕ್ಷಿಸುವ ಕರ್ತವ್ಯದಲ್ಲಿ ಲೋಪ ಮಾಡಿದಂತಾಗುತ್ತದೆ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಐಸಿಸ್ ಸಂಚು ಪ್ರಕರಣ : ಕರ್ನಾಟಕ, ಮಹಾರಾಷ್ಟ್ರದ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್​​ಐಎ ದಾಳಿ ; 13 ಜನರ ಬಂಧನ

ಫೆಬ್ರವರಿ 1 ರಂದು, ಹೈಕೋರ್ಟ್ರಾವ್ ಅವರ ವೈದ್ಯಕೀಯ ಜಾಮೀನು ಪ್ರಕರಣದ ಎಲ್ಲಾ ವಿಚಾರಣೆಯನ್ನು ಮುಗಿಸಿತ್ತು ಹಾಗೂ ಅವರ ಪತ್ನಿ ಹೆಮಲತಾ ಅಸಮರ್ಪಕ ವೈದ್ಯಕೀಯ ಆರೈಕೆ ಮತ್ತು ಅವರ ನಿರಂತರ ಜೈಲುವಾಸದಿಂದಾಗಿ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ಮೇಲಿನ ತೀರ್ಪನ್ನು ಕಾಯ್ದಿರಿಸಿತ್ತು.

ಈ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಾತ್ಮಕ ಭಾಷಣಗಳಿಗೆ ಸಂಬಂಧಿಸಿದೆ, ಇದು ಮರುದಿನ ಪಶ್ಚಿಮ ಮಹಾರಾಷ್ಟ್ರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement