ಸಿದ್ದಾಪುರ: ಮಂಗನಕಾಯಿಲೆ ಮೊದಲ ಪ್ರಕರಣ ದೃಢ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮೊದಲ ಪ್ರಕರಣ ಕಂಡುಬಂದಿದೆ.ಈ ಸಂಬಂಧ ತಹಶೀಲ್ದಾರರು  ಈ ಕುರಿತಂತೆ ಗ್ರಾಪಂ ಪಿ.ಡಿ.ಓಗಳ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕರೆದಿದ್ದರು.  ಎಲ್ಲ ಇಲಾಖೆಗಳ, ಸಾರ್ವಜನಿಕರ ಸಹಕಾರದಿಂದ ಈ ಕಾಯಿಲೆ ಉಲ್ಬಣವಾಗದಂತೆ ತಡೆಯುವದು ಮುಖ್ಯವಾಗಿದೆ ಎಂದು ತಹಶೀಲ್ದಾರ ಪ್ರಸಾದ ಎಸ್.ಎ. ಹೇಳಿದರು.
ಅವರು ತಾಪಂ ಸಭಾಭವನದಲ್ಲಿ ಈ ಕುರಿತಂತೆ ಗ್ರಾಪಂ ಪಿ.ಡಿ.ಓಗಳ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು,ಕುಳಿಬೀಡಿನ ಓರ್ವ ಮಹಿಳೆಗೆ ಈ ಕಾಯಿಲೆ ಕಂಡುಬಂದಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಆ ಭಾಗದ ಮೂವರಿಗೆ ರೋಗ ಲಕ್ಷಣದ ಶಂಕೆ ಕಂಡುಬಂದಿದ್ದು ಅವರ ರಕ್ತ ಪರೀಕ್ಷೆಯಿಂದ ಓರ್ವರಿಗೆ ಮಾತ್ರ ಪಾಸಿಟಿವ್ ಕಂಡುಬಂದಿದೆ. ಆ ಭಾಗದ ಗ್ರಾಮಗಳ ಜನರಿಗೆ ಈ ಕಾಯಿಲೆ ಹರಡಿದೆಯೇ ಎನ್ನುವ ಬಗ್ಗೆ ಮಾಹಿತಿ ಪಡೆಯಬೇಕಿದೆ. ಪಿಡಿಓಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕಾಯಿಲೆ ಲಕ್ಷಣದ ಬಗ್ಗೆ ಮಾಹಿತಿ ಕಲೆಹಾಕಬೇಕು. ಅಂಥ ಲಕ್ಷಣಗಳು ಕಂಡುಬಂದರೆ ಕೂಡಲೇ ವರದಿ ಸಲ್ಲಿಸಬೇಕು. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು, ವ್ಯಾಕ್ಸಿನ್ ತೆಗೆದುಕೊಳ್ಳುವದು ಮತ್ತು ಕಾಯಿಲೆ ಹೆಚ್ಚದಂತೆ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವದು ಮುಖ್ಯವಾಗಿದೆ ಎಂದರು.
ಕೆ.ಎಪ್.ಡಿ. ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಮಾತನಾಡಿ ಕುಳಿಬೀಡು ವ್ಯಾಪ್ತಿಯಲ್ಲಿ ೪ ಮಂಗಗಳು ಸತ್ತಿರುವ ಬಗ್ಗೆ ತಿಳಿದುಬಂದಿದ್ದು, ಒಂದರ ರಕ್ತ ಪರೀಕ್ಷೆಗೆ ಪುಣೆಗೆ ಕಳುಹಿಸಲಾಗಿದೆ. ಜಿಲ್ಲೆಯ ೭ ತಾಲೂಕುಗಳು ಮಂಗನ ಕಾಯಿಲೆ ಪಿಡೀತ ಪ್ರದೇಶವಾಗಿದ್ದು ಈ ತಾಲೂಕಿನಲ್ಲಿ ಹೆಚ್ಚು ಕಂಡುಬರುತ್ತಿದೆ. ಮಳೆಗಾಲದ ಮುನ್ನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು ಇನ್ನಿತರ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಗಸ್ಟನಿಂದ ವ್ಯಾಕ್ಸಿನ್ ಕೊಡಲು ಆರಂಭಿಸಿದ್ದು ಸಾರ್ವಜನಿಕರು ವ್ಯಾಕ್ಸಿನ್ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಮುಖ್ಯವಾಗಿ ಕಾಯಿಲೆಯ ಬಗ್ಗೆ ಹಾಗೂ ಅದರ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಲಸಿಕೆ ನೀಡಿಕೆ ಕಾರ್ಯಕ್ರಮ ಹೆಚ್ಚಿಸಬೇಕಿದೆ ಎಂದರು.
ತಾಪಂ ಇ.ಓ. ಪ್ರಶಾಂತರಾವ್, ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ಇದ್ದರು.

ಇಂದಿನ ಪ್ರಮುಖ ಸುದ್ದಿ :-   ಕಮಲ-ಜೆಡಿಎಸ್‌ ಮೈತ್ರಿ ಬೆನ್ನಲ್ಲೇ ಯಡಿಯೂರಪ್ಪ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement