ಅಮೆರಿಕ ಬಜೆಟ್‌ ನಿರ್ವಹಣೆ ಸಮಿತಿ ಮುಖ್ಯಸ್ಥ ಹುದ್ದೆಗೇರಲು ನೀರಾಗೆ ತೊಡಕು

ವಾಷಿಂಗ್ಟನ್‌: ಅಮೆರಿಕದ ಶ್ವೇತಭವನದ ಬಜೆಟ್‌ ನಿರ್ವಹಣೆ ಸಮಿತಿಯ ಮುಖ್ಯಸ್ಥೆಯಾಗಿ ಭಾರತೀಯ ಮೂಲದ ನೀರಾ ಟಂಡನ್‌ ಆಯ್ಕೆಯಾಗುವುದಕ್ಕೆ ತೊಡಕು ಎದುರಾಗಿದೆ.
ಟಂಡನ್‌ ನೀಡಿದ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಅವರು ಹುದ್ದೆಗೆ ಸಮರ್ಥರಲ್ಲ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟರ್‌ಗಳು ದೂರಿರುವುದು ಇದಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಲ್ಲಿ ನೀರಾ ಟಂಡನ್‌ ತಮ್ಮ ಹಳೆಯ ೧೦೦೦ಕ್ಕೂ ಅಧಿಕ ಟ್ವೀಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.
ಟಂಡನ್‌ ಅವರನ್ನು ನೇಮಕ ಮಾಡುವುದಕ್ಕೆ ವಿರೋಧ ಪಕ್ಷ ರಿಪಬ್ಲಿಕನ್‌ನ ಮೂರು ಮಂದಿ ಸೆನೇಟರ್‌ಗಳು ಹಾಗೂ ಆಡಳಿತರೂಢ ಡೆಮಾಕ್ರೆಟಿಕ್‌ ಪಕ್ಷದ ಓರ್ವ ಸನೇಟರ್‌ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಅಧಿಕಾರಕ್ಕೆ ಬಂದಿದ ನೂತನ ಅಧ್ಯಕ್ಷ ಜೋ ಬಿಡೆನ್‌ ಅವರು, ನೀರಾ ಟಂಡನ್‌ರವರನ್ನು ಶ್ವೇತಭವನದ ಬಜೆಟ್‌ ನಿರ್ವಹಣೆ ಸಮಿತಿಯ ಮುಖ್ಯಸ್ಥೆಯಾಗಿ ನೇಮಕಗೊಳಿಸಿದ್ದರು. ಈ ನೇಮಕ ಅಧಿಕೃತವಾಗಬೇಕಾದರೆ ಸೆನೆಟ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲಬೇಕು.
ಆದರೆ ನೀರಾ ಟಂಡನ್‌ ವಿರುದ್ದ ಆಕ್ಷೇಪಾರ್ಹ ಟ್ವೀಟ್‌ ಮಾಡಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಅವರ ವಿರುದ್ಧ ಮತ ಚಲಾಯಿಸುವುದಾಗಿ ನಾಲ್ಕು ಮಂದಿ ಸೆನೇಟರ್‌ಗಳು ಹೇಳಿದ್ದಾರೆ. ನೀರಾಗೆ ಅವರ ಟ್ವೀಟ್‌ಗಳೇ ಮುಳುವಾಗುವ ಸಾಧ್ಯತೆಯಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಹೊಸ ಕೋವಿಡ್ ಮುಂದಿನ ರೂಪಾಂತರವು ಒಮಿಕ್ರಾನ್‌ಗಿಂತ ಹೆಚ್ಚು ಅಪಾಯಕಾರಿಯಾಗಿರಬಹುದು-ಲ್ಯಾಬ್ ಅಧ್ಯಯನ: ವರದಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement