ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಇಂಧನ ತೆರಿಗೆ ಇಳಿಕೆ ಕುರಿತು ಇಂಧನ ಸಚಿವರು- ರಾಜ್ಯ ಸರ್ಕಾರ ಚರ್ಚಿಸಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಇಂಧನ ತೆರಿಗೆ ಇಳಿಕೆ ಕುರಿತಂತೆ ರಾಜ್ಯ ಸರಕಾರ ಹಾಗೂ ಕೇಂದ್ರದ ಇಂಧನ ಖಾತೆ ಸಚಿವರು ಪರಸ್ಪರ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಪೆಟ್ರೋಲ್‌ ದರ ಹೆಚ್ಚಳದ ಬಗ್ಗೆ ಈಗಾಗಲೇ ಹಣಕಾಸು ಸಚಿವರು ಮಾತನಾಡಿದ್ದಾರೆ. ಕೇಂದ್ರದ ತೆರಿಗೆಯ 30 ರೂ.ಗಳಲ್ಲಿ 17 ರೂ. ರಾಜ್ಯಗಳಿಗೆ ಹೋಗುತ್ತದೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಒಟ್ಟಿಗೆ ದರ ಕಡಿತ ಮಾಡಬೇಕು. ಇದರ ಬಗ್ಗೆ ಜಂಟಿಯಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಕೊರೊನಾ 2ನೇ ಅಲೆ ನಿಯಂತ್ರಿಸಲು ಆಯಾ ರಾಜ್ಯ ಸರಕಾರಗಳು ವಿವೇಚನೆಯುಕ್ತ ನಿಬಂಧನೆ ಹಾಕಬೇಕಾಗುತ್ತದೆ. 2ನೇ ಅಲೆ ಕುರಿತು ಜಾಗೃತಿ ಮೂಡಿಸುವುದು ಅವಶ್ಯವಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸುದೈವದಿಂದ ಕರ್ನಾಟಕದಲ್ಲಿ 2ನೇ ಅಲೆ ಅಷ್ಟಾಗಿ ಕಂಡು ಬಂದಿಲ್ಲ. ಆದರೂ ಮೈಮರೆಯಬಾರದು ಎಂದರು.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಸೇರಿ ಇತರ ಪಕ್ಷಗಳ ಜತೆ ಮೈತ್ರಿ ಸಾಧಿಸಲು ಚರ್ಚೆಗಳು ನಡೆದಿವೆ. ಕೇರಳದಲ್ಲಿ ಬಿಜೆಪಿ ಪರ್ಯಾಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ವಿಜಯವಾಡ : ರೋಡ್ ಶೋ ವೇಳೆ ಕಲ್ಲೆಸೆತ ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement