ಜನ ಬೀದಿಗೆ ಬಂದ್ರೆ ಸರ್ಕಾರಗಳೇ ಬದ್ಲಾಗಿವೆ, ಇನ್ನು ಕಾಯ್ದೆ ಯಾವ ಲೆಕ್ಕ

ಹರಿಯಾಣ: ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗಿವೆ, ಇನ್ನು ಕಾಯ್ದೆಗಳು ಯಾವ ಲೆಕ್ಕ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.
ಅವರು ಸೋನಿಪತ್‌ ಜಿಲ್ಲೆಯಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿ, ಜನರನ್ನು ಸೇರಿಸಿದರೆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ. ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗುತ್ತವೆ ಎಂಬುದನ್ನು ಸಚಿವರು ಮರೆಯಬಾರದು ಎಂದರು.
ಸಚಿವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜನ ಸಂಘಟನೆಯನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ. ಇದು ಕೇವಲ ರೈತರ ಹೋರಾಟ ಮಾತ್ರವಲ್ಲ, ಬಡವರ , ದಿನಗೂಲಿ ನೌಕರರ ಹಾಗೂ ಬಡ ವರ್ಗದ ಜನರ ಆಂದೋಲನ ಎಂದು ಹೇಳಿದ್ದಾರೆ.
ಕೇವಲ ಕೃಷಿ ಕಾಯ್ದೆ ಮಾತ್ರವಲ್ಲ. ವಿದ್ಯುತ್‌ ಕಾಯ್ದೆ, ಬೀಜ ಕಾಯ್ದೆ ಸೇರಿ ಹಲವು ರೈತ ವಿರೋಧಿ ಕಾಯ್ದೆಗಳಿವೆ. ಇನ್ನೆಷ್ಟು ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೇ ಏರುತ್ತಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಮಾಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement