ಮೀಸಲಾತಿಗೆ ಬಡತನವೇ ಮಾನದಂಡವಾಗಲಿ:ಹೊರಟ್ಟಿ ಸಲಹೆ

ಬೆಂಗಳೂರು: ಮೀಸಲಾತಿ ಪಡೆಯಲು ಬಡತನ, ಆರ್ಥಿಕ ಪರಿಸ್ಥಿತಿಯೇ ಮಾನದಂಡವಾಗಬೇಕು. ಬಡವರಿಗೆ ಮೀಸಲಾತಿ ಸಿಗಬೇಕು ಎಂದು ವಿಧಾನಪರಿಷತ್‌ನ ಸಭಾಪತಿ ಬಸವರಾಜಹೊರಟ್ಟಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಕುರಿತಾದ ಚರ್ಚೆಗಳು ನಡೆದಿವೆ.ಕರ್ನಾಟಕದಲ್ಲಷ್ಟೇ ಅಲ್ಲ, ದೇಶಾದ್ಯಂತ ನಡೆದಿದೆ. ಎಲ್ಲ ಅರ್ಹ ಬಡವರಿಗೂ ಮೀಸಲಾತಿ ಸಿಗಬೇಕು. ರಾಜ್ಯದಲ್ಲೂ ವಿವಿಧ ಜಾತಿ, ಸಮುದಾಯಗಳು ಮೀಸಲಾತಿಗೆ ಹೋರಾಟ ನಡೆಸಿವೆ. ಆರ್ಥಿಕ ಪರಿಸ್ಥಿತಿ, ಬಡತನವೇ ಮೀಸಲಾತಿಗೆ ಮಾನದಂಡವಾದರೆ ಎಲ್ಲ ಜಾತಿಯ ಬಡವರಿಗೂ ಮೀಸಲಾತಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ: ವಿಧಾನಪರಿಷತ್‌ನ ಸಭಾಪತಿಯಾದ ಮೇಲೆ ಕೆಲ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದೇನೆ. ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ. ಸದನದ ಒಳಗೆ ಇನ್ನು ಮುಂದೆ ಯಾರೂ ಮೊಬೈಲ್ ತರುವಂತಿಲ್ಲ.
ಮೊಬೈಲ್ ನಿರ್ಬಂಧ ಹಾಗೂ ಸದನದಲ್ಲಿ ಪಾಲಿಸಬೇಕಾದ ಕೆಲ ನಿಯಮಗಳ ಬಗ್ಗೆ ಎಲ್ಲ ಸದಸ್ಯರಿಗೂ ಪತ್ರ ಬರೆದಿದ್ದೇನೆ ಎಂದರು.
ಮಾಧ್ಯಮಗಳಿಗೆ ನಿರ್ಬಂಧ ಹೇರುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳಿಗೆ ಅಗತ್ಯ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಅವರು ಹೇಳಿದರು.
ಮಾಧ್ಯಮಗಳೂ ಕಲಾಪದ ಚರ್ಚೆ ಮತ್ತಿತರ ಮುಖ್ಯ ವಿಷಯಗಳ ಬಗ್ಗೆ ಆದ್ಯತೆ ಕೊಡಬೇಕು. ಯಾರ ಸದಸ್ಯರು ಮೊಬೈಲ್ ನೋಡುವುದನ್ನು, ನಿದ್ದೆಯಂತಹ ಸಣ್ಣ ಘಟನೆಗಳನ್ನು ಎತ್ತಿ ತೋರಿಸಬೇಡಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement