ಪುಣೆ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗಾಗಿ ೨೦೦೦ದಿಂದ ೩೦೦೦ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಪುಣೆಯ ಖಾಸಗಿ ಆಸ್ಪತ್ರೆಗಳಿಗೆ ಮಹಾನಗರ ಪಾಲಿಕೆ ನಿರ್ದೇಶನ ನೀಡಿದೆ.
ಪಿಎಂಸಿ ಆಯುಕ್ತ ವಿಕ್ರಮ್ ಕುಮಾರ್, ಕೊರೊನಾ ರೋಗಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದರು
ಖಾಸಗಿ ಆಸ್ಪತ್ರೆಗಳು ತಾವು ಕಾಯ್ದಿರಿಸಿದ ಹಾಸಿಗೆಗಳ ಬಗ್ಗೆ ನಮಗೆ ತಿಳಿಸಲಿದ್ದು, ಅದರ ಪ್ರಕಾರ ಡ್ಯಾಶ್‌ಬೋರ್ಡ್ ನವೀಕರಿಸಲಾಗುವುದು. ಪ್ರಸ್ತುತ, ಪಿಎಂಸಿ ನಾಗರಿಕ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 1,200 ರಿಂದ 1,500 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಪುಣೆಯಲ್ಲಿ ಕೊವಿಡ್-೧೯ ಆರೈಕೆ ಕೇಂದ್ರಗಳನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಪುಣೆ ನಗರದಲ್ಲಿ ಮಂಗಳವಾರ 661 ಹೊಸ ಪ್ರಕರಣಗಳು ಮತ್ತು ನಾಲ್ಕು ಸಾವುನೋವುಗಳು ವರದಿಯಾಗಿವೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ