ಯತ್ನಾಳ ಪರ ವಿಶ್ವನಾಥ ಬ್ಯಾಟಿಂಗ್‌

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಮಾಡಿರುವ ಆರೋಪದಲ್ಲಿ ನ್ಯಾಯವಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷ, ಸರ್ಕಾರದ ವಿರುದ್ಧ ಹೇಳಿಕೆ ನೀಡಿಲ್ಲ ಅಲ್ಲದೆ ಜನ ವಿರೋಧಿ ಭಾಷಣಗಳನ್ನೂ ಮಾಡಿಲ್ಲ, ಸರ್ಕಾರದ ರೀತಿ ನೀತಿಗಳ ಬಗ್ಗೆ ಹೇಳಿದ್ದಾರೆ ಎಂದು ಯತ್ನಾಳ ಪರ ಬ್ಯಾಟಿಂಗ್‌ ಮಾಡಿದ್ದಾರೆ..
ಇಂತಹ ವಿಷಯಗಳ ಬಗ್ಗೆ ಪ್ರತಿಪಕ್ಷಗಳೇ ಮಾತನಾಡದಿದ್ದರೆ ಮತ್ಯಾರು ಮಾಡಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರುಈ ಇಬ್ಬರೂ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು..
ಮೀಸಲಾತಿಯಲ್ಲಿ ನ್ಯಾಯವಿದೆ:ಯತ್ನಾಳ ಸಂವಿಧಾನದ ಚೌಕಟ್ಟಿನಲ್ಲೇ ಮಾತನಾಡಿದ್ದಾರೆ. ವಿವಿಧ ಸಮುದಾಯಗಳ ಮೀಸಲಾತಿ ವಿಚಾರ.ರಾಜ್ಯದಲ್ಲಿ ಹೋರಾಟ ಹೆಚ್ಚಾಗಿದೆ. ಮೇಲ್ವರ್ಗದಿಂದ ಹಿಡಿದು ಎಲ್ಲರೂ ಬೀದಿಗಿಳಿದಿದ್ದಾರೆ. ಮೆರವಣಿಗೆ-ಸತ್ಯಾಗ್ರಹ ಮಾಡುತ್ತಿದ್ದು,
ಪ್ರಜಾಪ್ರಭೂತ್ವದಲ್ಲಿ ನ್ಯಾಯ ಕೇಳಲು ಎಲ್ಲರಿಗೂ ಅವಕಾಶವಿದೆ. ಸರ್ಕಾರ ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೇವಲ ಮನವಿ ಸ್ವೀಕಾರದಿಂದ ಎಲ್ಲವೂ ಮುಗಿಯಲ್ಲ ಸರ್ಕಾರ ಯಾವ ವಿಚಾರದಲ್ಲೂ ಏನೂ ಮಾಡುತ್ತಿಲ್ಲ ಎಂದು ದೂರಿದರು.
ಮೀಸಲಾತಿ ಕೇಳಿದಾಕ್ಷಣ ಕೊಡಲು ಬರುವುದಿಲ್ಲ. ಅದಕ್ಕೆ ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಆದರೆ ಸರ್ಕಾರ ನಮಗೆ ಸಂಬಂಧವೇ ಇಲ್ಲ ಅಂತ ಸುಮ್ಮನಿದೆಯಲ್ಲ ಎಂದರು.

ಪ್ರಮುಖ ಸುದ್ದಿ :-   ಕೊನೆಗೂ 44 ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಯಾರಿಗೆ ಯಾವ ನಿಗಮ ಮಂಡಳಿ; ಪಟ್ಟಿ ಇಲ್ಲಿದೆ..

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement