ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಕರು ಜೈಲಿಗೆ!

ದಾವಣಗೆರೆ: ರಸ್ತೆ ತೆರಿಗೆ ಕಟ್ಟದ ಇಬ್ಬರು ಲಾರಿ ಮಾಲಿಕರನ್ನು ನಗರದ ಜೆಎಂಎಫ್‌ಸಿ ನ್ಯಾಯಾಲಯ ಕಾರಾಗೃಹಕ್ಕಟ್ಟಿದೆ. ರಸ್ತೆ ತೆರಿಗೆ ಕಟ್ಟದವರನ್ನು ಜೈಲಿಗೆ ಕಳಿಸಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.
ಇಲ್ಲಿನ ಬೀಡಿ ಲೇಔಟ್‌ನ ಮಹಮ್ಮದ್‌ ಸಮಿವುಲ್ಲಾ ಹಾಗೂ ಟಿಪ್ಪು ನಗರದ ಮುಬಾರಕ್‌ ಅವರನ್ನು ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗಿದೆ. ತೆರಿಗೆ ಕಟ್ಟಿದ ನಂತರ ಬಿಡುಗಡೆ ಮಾಡಲಾಗುವುದು ಎಂದು ಆರ್‌ಟಿಒ ಅಧಿಕಾರಿ ತಿಳಿಸಿದ್ದಾರೆ.
ಸದ್ಯ 72 ಲಾರಿ ಮಾಲೀಕರ ವಿರುದ್ಧ 1 ಮತ್ತು 2 ನೇ ಜೆಎಫ್‌ಎಂಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌‌ ಹಾಕಲಾಗಿದೆ. 8 ಜನರ ವಿರುದ್ಧ ಬಂಧನದ ವಾರೆಂಟ್‌ ಹೊರಡಿಸಲಾಗಿದೆ. ಉಳಿದವರಿಗೆ ಸಮನ್ಸ್‌ ಹೋಗಿದೆ ಎಂದು ಆರ್‌ಟಿಒ ಅಧಿಕಾರಿ ಶಾನಭೋಗ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜೀವ ಬೆದರಿಕೆ, ವಂಚನೆ ಪ್ರಕರಣ: ಕೇಂದ್ರ ಸಚಿವ ಸೋಮಣ್ಣ ಪುತ್ರ ಅರುಣ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

ನಿಮ್ಮ ಕಾಮೆಂಟ್ ಬರೆಯಿರಿ

advertisement