೮೦ ಕೋಟಿ ರೂ.ವಿದ್ಯುತ್‌ ಬಿಲ್‌ ಕಂಡು ರಕ್ತದೊತ್ತಡ ಹೆಚ್ಚಾಗಿ ವ್ಯಕ್ತಿ ಆಸ್ಪತ್ರೆಗೆ

ಮುಂಬೈ: ಸುಮಾರು 80 ಕೋಟಿ ರೂ.ಗಳ ವಿದ್ಯುತ್ ಬಿಲ್ ಪಡೆದು ಆಘಾತಕ್ಕೊಳಗಾದ ನಲಸೋಪರಾದ 80 ವರ್ಷದ ವ್ಯಕ್ತಿಯನ್ನು ಅಧಿಕ ರಕ್ತದೊತ್ತಡದ ಕಾರಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇಂಡಿಯಾ ಟುಡೆ ವರದಿ ಪ್ರಕಾರ, ನಲಸೋಪರಾದ ನಿರ್ಮಲ್ ಗ್ರಾಮದಲ್ಲಿ ಅಕ್ಕಿ ಗಿರಣಿ ನಡೆಸುತ್ತಿರುವ ಗಣಪತ್ ನಾಯಕ್ ಹೃದಯ ರೋಗಿಯಾಗಿದ್ದು, ಸುಮಾರು ೮೦ ಕೋಟಿ ರೂ.ಗಳ ವಿದ್ಯುತ್‌ ಪಡೆದ ನಂತರ ಅಧಿಕ ರಕ್ತದೊತ್ತಡ ಉಂಟಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು,

ಇದು ತಮ್ಮಿಂದಾದ ದೋಷ ಎಂದು ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಎಂಎಸ್‌ಇಡಿಸಿಎಲ್) ಹೇಳಿದೆ ಮತ್ತು ಮೀಟರ್ ರೀಡಿಂಗ್‌ ತೆಗೆದುಕೊಳ್ಳುವ ಏಜೆನ್ಸಿಯಿಂದಾಗಿ ಈ ತಪ್ಪು ಸಂಭವಿಸಿದೆ. ಇದನ್ನು ಸರಿಪಡಿಸಲಾಗುವುದು ಎಂದು ಹೇಳಿದೆ.
ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಆಗಸ್ಟ್ 2020 ರಲ್ಲಿ 40,000 ರೂ.ಗಳ ವಿದ್ಯುತ್ ಬಿಲ್ ಪಡೆದ ನಂತರ ಖಿನ್ನತೆ ಮತ್ತು ಉದ್ವಿಗ್ನತೆ ಉಂಟಾಗಿ ನಾಗ್ಪುರದಲ್ಲಿ 57 ವರ್ಷದ ವ್ಯಕ್ತಿಯೊಬ್ಬ ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಇಂಡಿಯಾ ಟಿವಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಅತ್ಯಧಿಕ ಅಪಾಯದ ಮಟ್ಟ 6ರ ವಿರುದ್ಧ ರಕ್ಷಣೆಗಾಗಿ ದೇಶದ ಅತ್ಯಂತ ಹಗುರ ಬುಲೆಟ್ ಪ್ರೂಫ್ ಜಾಕೆಟ್‌ ಅಭಿವೃದ್ಧಿಪಡಿಸಿದ ಡಿ ಆರ್‌ ಡಿ ಒ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement